ಯುದ್ಧಾಪರಾಧ ಆರೋಪಗಳಿಂದ ನೇವಿ ಸೀಲ್ ಖುಲಾಸೆ

Update: 2019-07-03 17:03 GMT

ಸಾನ್ ಡೀಗೊ (ಅಮೆರಿಕ), ಜು. 3: ಇರಾಕ್‌ನಲ್ಲಿ ಯುದ್ಧಾಪರಾಧ ನಡೆಸಿದ ಆರೋಪಗಳಿಂದ ಅಮೆರಿಕದ ನೇವಿ ಸೀಲ್ ಪ್ಲಟೂನ್ ಮುಖ್ಯಸ್ಥನೊಬ್ಬನನ್ನು ಸೇನಾ ನ್ಯಾಯಾಲಯವೊಂದು ಮಂಗಳವಾರ ಖುಲಾಸೆಗೊಳಿಸಿದೆ.

ಆದಾಗ್ಯೂ, ಸ್ಪೆಶಲ್ ಆಪರೇಶನ್ಸ್ ಮುಖ್ಯಸ್ಥ ಎಡ್ವರ್ಡ್ ಗ್ಯಾಲಗೆರ್‌ರನ್ನು ಕೊಲೆ ಮತ್ತು ಇತರ ಆರೋಪಗಳಿಂದ ನ್ಯಾಯಾಲಯವು ಮುಕ್ತಗೊಳಿಸಿದರೂ, ಬಂಧಿತ ಐಸಿಸ್ ಉಗ್ರನ ಶವದ ಜೊತೆ ಪೋಸ್ ಕೊಟ್ಟು ಭಾವಚಿತ್ರ ತೆಗೆಸಿಕೊಂಡ ಆರೋಪವನ್ನು ಉಳಿಸಿದೆ.

ಈಗ ಅವರ ವಿರುದ್ಧ ಮಾನವ ಶವದೊಂದಿಗೆ ಅನಧಿಕೃತವಾಗಿ ಚಿತ್ರ ತೆಗೆಸಿಕೊಂಡ ಒಂದು ಆರೋಪ ಮಾತ್ರವಿದೆ. ಇದು ಸಾಬೀತಾದರೆ, ಗರಿಷ್ಠ ನಾಲ್ಕು ತಿಂಗಳ ಶಿಕ್ಷೆಯನ್ನು ಅವರು ಪಡೆಯಬಹುದಾಗಿದೆ.

ಪೂರ್ವಯೋಜಿತ ಕೊಲೆ ಆರೋಪದಲ್ಲಿ ಅವರು ದೋಷಿ ಎಂಬುದಾಗಿ ಸಾಬೀತಾಗಿದ್ದರೆ, ಅವರು ಜೀವನಪರ್ಯಂತ ಜೈಲಿನಲ್ಲಿ ಕಳೆಯಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News