ಐಎಂಎಫ್ ಮುಖ್ಯಸ್ಥರಾಗಿ ಡೇವಿಡ್ ಲಿಪ್ಟನ್

Update: 2019-07-03 17:09 GMT

ವಾಶಿಂಗ್ಟನ್, ಜು. 3: ಅಮೆರಿಕದ ಅರ್ಥಶಾಸ್ತ್ರಜ್ಞ ಡೇವಿಡ್ ಲಿಪ್ಟನ್‌ರನ್ನು ಅಂತ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮಧ್ಯಂತರ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಅವರು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥೆಯಾಗಿ ನೇಮಕಗೊಂಡಿರುವ ಕ್ರಿಸ್ಟಿನಾ ಲ್ಯಾಗರ್ಡ್ ತೆರವು ಮಾಡಿರುವ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.

‘‘ಪ್ರಥಮ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಡೇವಿಡ್ ಲಿಪ್ಟನ್‌ರನ್ನು ಐಎಂಎಫ್‌ನ ಉಸ್ತುವಾರಿ ಆಡಳಿತ ನಿರ್ದೇಶಕರಾಗಿ ನೇಮಿಸಿದ್ದು, ಅವರ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಭರವಸೆ ಹೊಂದಿದ್ದೇವೆ’’ ಎಂದು ಐಎಂಎಫ್ ಮಂಡಳಿ ಮಂಗಳವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News