×
Ad

​ಚೆಂಬುಗುಡ್ಡೆ: ಕತ್ತಿಯಿಂದ ಕಡಿದು ವ್ಯಕ್ತಿಯ ಬರ್ಬರ ಹತ್ಯೆ

Update: 2019-07-03 22:39 IST

ಉಳ್ಳಾಲ: ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಬಳಿ ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ನಾರಾಯಣ (46) ಎಂದು ಗುರುತಿಸಲಾಗಿದೆ.

ಮೃತ ನಾರಾಯಣ ಅವರ ಚೆಂಬುಗುಡ್ಡಯ ಮನೆಯಲ್ಲಿ ಪತ್ನಿ ಲಲಿತಾ ಮತ್ತು‌ ಅವರ ಮಗ ರಾಜೇಶ್ ವಾಸವಾಗಿದ್ದರು. ಅಲ್ಲದೆ ಇವರ ಜೊತೆಯಲ್ಲಿ ಲಲಿತಾ ಅವರ ಅಣ್ಣನ ಮಗ  ಕೂಡ ವಾಸವಾಗಿದ್ದರು ಎನ್ನಲಾಗಿದೆ.

ಬುಧವಾರ ಸಂಜೆ ಲಲಿತಾ ಅವರು‌ ಮನೆಯಿಂದ ಹೊರ ಹೋಗಿದ್ದಾಗ ಘಟನೆ ನಡೆದಿದೆ.  ಅವರು ರಾತ್ರಿಯ ವೇಳೆ ಮನೆಗೆ ಬಂದಾಗ ನಾರಾಯಣ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಬಳಿಕ ಸ್ಥಳೀಯರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರಾಜೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಉಳ್ಳಾಲ ಎಸ್ಐ ಗೋಪಿಕೃಷ್ಣ, ಪಿಎಸ್ ಐ ಗುರುಕಾಂತಿ ಅವರು ಭೇಟಿ ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಸಂಭವಿಸಿ ಹತ್ಯೆ ನಡೆದಿದೆ ಎನ್ನಲಾಗಿದ್ದು, ಸಾವಿನ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News