ಪುರಸಭೆಯಿಂದ ಅಂಗಡಿಮಳಿಗೆಗೆ ದಾಳಿ: ನಿಷೇಧಿತ ಪ್ಲಾಸ್ಟಿಕ್ ಚೀಲ ವಶ

Update: 2019-07-03 17:30 GMT

ಭಟ್ಕಳ:  ಪ್ಲಾಸ್ಟಿಕ್ ದಾಳಿಯ ಮುಂದುವರೆದ ಭಾಗವಾಗಿ ಪುರಸಭಾ ಅಧಿಕಾರಿಗಳು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾರ ನಿರ್ದೇಶನದಂತೆ ಪಟ್ಟಣದ ವಿವಿಧ ಅಂಗಡಿ ಮಳಿಗೆಗಳು, ಚಿಕನ್ ಸೆಂಟರ್ ಸೇರಿದಂತೆ ಬೀದಿ ಬದಿಯ ವ್ಯಾಪಾರದ ಅಂಗಡಿಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆದು ದಂಡ ವಿಧಿಸಿದ ಘಟನೆ ನಡೆದಿದೆ.

ಕಳೆದ ರವಿವಾರ ಸಂತೆ ಮಾರುಕಟ್ಟೆಗೆ ದಾಳಿ ನಡೆಸಿದ ಪುರಸಭೆಯ ಸಿಬ್ಬಂಧಿಗಳ ತಂಡ ಸುಮಾರು 50 ಕೆಜಿ ಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದರು. ಈ ವರ್ಷದ ಆರಂಭದಿಂದ ಇಲ್ಲಿಯ ತನಕ 150ಕೆಜಿ ಗೂ  ಹೆಚ್ಚು ವಿವಿಧ ರೀತಿಯ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯಾಧಿಕಾರಿ ಸೋನಿಯಾ ಸುಮನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂದು ಪಟ್ಟಣದ ಮೀನು ಮಾರುಕಟ್ಟೆ, ಹೂವಿನ ಅಂಗಡಿ, ಚಿಕನ್ ಸೆಂಟರ್, ತರಕಾರಿ ಅಂಗಡಿ, ಹಣ್ಣು ಮಾರಾಟ ಮಾಡುವ ಅಂಗಡಿಗಳಿಗೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹ್ಮದ ಅಲಿ ರೋಡಿನಲ್ಲಿರುವ ಮಾಲ್‍ಗಳಿಗೂ ದಾಳಿ ನಡೆಸಿ ಸುಮಾರು 25ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವವರ ಅಂಗಡಿಗೆ ದಾಳಿ ನಡೆಸಿ ಪ್ಲಾಸ್ಟಿಕ ವಶಕ್ಕೆ ಪಡೆದು ಪ್ರಥಮ ಬಾರಿಗೆ 500ರೂ ಗಳ ದಂಡ ವಿಧಿಸಿದ್ದಾರೆ. ನಿಷೇಧಿತ ಪ್ಲಾಸ್ಟಿಕ ಮಾರಾಟ ಕಂಡು ಬಂದರೆ ಮುಂದಿನ ದಿನಗಳಲ್ಲಿ ದಂಡದ ಪ್ರಮಾಣ 25ಸಾವಿರದ ವರೆಗೂ ವಸ್ತರಿಸುವ ಅವಕಾಶ ಇದೆ ಎಂದು ಪುರಸಭೆ ಅಧಿಕಾರಿಗಳು ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಭಟ್ಕಳ ನಿರ್ಮಾಣಕ್ಕೆ ಸಹಕರಿಸುವಂತೆ ಪುರಸಭೆ ಈಗಾಗಲೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದು ಜಾಗೃತಿ ಶಿಬಿರವನ್ನು ಮಾಡಿತ್ತು. ಆದರೂ ಪ್ಲಾಸ್ಟಿಕ ಬಳಕೆ ನಿಂತಿಲ್ಲ. ಹೆಚ್ಚಿನ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ ದೊರಕಿದರೆ ಅಂತಹ ಮಳಿಗೆಗಳನ್ನು ಸೀಜ್ ಮಾಡಲಾಗು ವದು ಎಂದು ಹಿರಿಯ ಆರೋಗ್ಯಾಧಿಕಾರಿ ಸೊಜಿಯಾ ಸುಮನ್ ಪತ್ರಿಕೆಗೆ ತಿಳಿಸಿದ್ದಾರೆ. ಕಿರಿಯ ಆರೋಗ್ಯ ನೀರಿಕ್ಷಕ ಅಜೆಯ ಭಂಡಾರಿ ಪುರಸಭೆ ಸಿಬ್ಬಂದಿ, ಪೊಲೀಸ್ ಇಲಾಖೆ ಕಾರ್ಯಚರಣೆಲ್ಲಿ ಭಾಗಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News