ಭಟ್ಕಳ: ಪ್ರಾಥಮಿಕ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರ
ಭಟ್ಕಳ: ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವದಲ್ಲದೆ ಆರೋಗ್ಯವಂತ ಶರೀರರವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯುವಪೀಳಿಗೆಗೆ ಸದೃಢ ದೇಹ, ಸದೃಡ ಮನಸ್ಸು, ಬಲಿಷ್ಠ ಭಾರತ ನಿರ್ಮಾಣದ ಕುರುಹು ಎಂದು ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಬೆಳಕೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಭಟ್ಕಳ ತಾಲೂಕ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೈಹಿಕ ಶಿಕ್ಷಕರ ಕ್ರೀಯಾಶೀಲತೆ ಶಾಲೆಗೆ ಹೆಸರು ತಂದುಕೊಡುವದಲ್ಲದೆ, ಸದಾ ಚಟುವಟಿಕೆ ಇಂದ ಇರಲು ಸಾದ್ಯ ಎಂದರು. ನ್ಯೂ ಇಂಗ್ಲೀóಷ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಶಿರೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾರವಾರದ ಉಪನಿರ್ದೇಶಕರ ಕಚೇರಿಯ ವಿಷಯ ಪರೀವೀಕ್ಷಕ ಎನ್.ಜಿ. ನಾಯ್ಕ, ದೈಹಿಕ ಶಿಕ್ಷಣ ವಿಷಯ ಪರೀವೀಕ್ಷಕ ಡಿ.ವಿ. ನಾಯ್ಕ, ಪ್ರೌ..ದೈ.ಶಿ. ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ನಾಯಕ, ಪ್ರಾ. ದೈ.ಶಿ. ಶಿಕ್ಷಕರ ಸಂಘದ ಎಸ್.ಪಿ ಹೆಗಡೆ ಇದ್ದರು.
ಭಟ್ಕಳದ ಇತಿಹಾಸದಲ್ಲೆ ಮೊದಲ ಬಾರಿಗೆ ರಾಜ್ಯ ಮಟ್ಟದ ಹೊನಲು ಇಲಾಖಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿರ್ವಹಿಸಿದ ಅಲ್ಲದೆ ಜಿಲ್ಲಾ ಮಟ್ಟದ ವೀಕಲಚೇತನದಂತಹ ಕ್ರೀಡಾಕೂಟವನ್ನು ಭಟ್ಕಳದಲ್ಲೆ ನಡೆಸಿ ನಿವೃತ್ತಿ ಹೊಂದಿದ ದೈಹಿಕ ಪರೀವೀಕ್ಷಕ ಶ್ರೀಕಾಂತ ನಾಯ್ಕ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಸಿ ಇಲಾಖೆ ಹಾಗೂ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕ ವಾಸು ಪೂಜಾರಿ ಪ್ರಾರ್ಥಿನೆ, ಗೋಪಾಲ ನಾಯ್ಕ ಪ್ರಾಸ್ತಾವಿಕ, ಎಸ್ ವಿ ಹೆಗಡೆ ಸ್ವಾಗತ, ಸರೇಶ ನಾಯ್ಕ ವಂದಿಸಿದರೆ ಮಧುಕರ ಹೆಗಡೆಕರ, ವಿ.ಜಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರ ಪರವಾಗಿ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಅನಿಸಿಕೆ ವ್ಯಕ್ತಪಡಿಸಿದರು.