ಗೋಕಳವು ವಿರೋಧಿಸಿ ಕಾಪು ತಹಶಿಲ್ದಾರ್ ಕಚೇರಿ ಎದುರು ಪ್ರತಿಭಟನೆ
ಕಾಪು : ಗೋಕಳ್ಳತನ, ಗೋವಧೆ, ಅಕ್ರಮ ಗೋ ಸಾಗಾಟ ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಕಾಪು ತಾಲ್ಲೂಕು ಸಂಘಟನೆಯ ವತಿಯಿಂದ ಬುಧವಾರ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ಗೋವುಗಳ ಕಳ್ಳತನದ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಲಾಗುತ್ತದೆ. ಗೋ ಕಳ್ಳತನ ತಡೆಯಲು ಹೋದವರ ವಿರುದ್ಧವೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಇದು ಇನ್ನೂ ಮುಂದುವರಿದರೆ ಕರಾವಳಿಯಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಂದು ಎಚ್ಚರಿಸಿದರು.
ಕಾಪು ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕಾಪು ತಹಶೀಲ್ದಾರ್ ಸಂತೋಷ್ ಕುಮಾರ್ ಅವರ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾಪು ತಾಲ್ಲೂಕು ಸಂಘ ಚಾಲಕ ತಾರನಾಥ ಕೋಟ್ಯಾನ್, ವಿಶ್ವ ಹಿಂದೂ ಪರಿಷತ್ ಕಾಪು ವಲಯಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಭಜರಂಗದಳ ಕಾಪು ಪ್ರಖಂಡ ಸಂಚಾಲಕ ರಾಜೇಶ್ ಕೋಟ್ಯಾನ್ ಪಡುಬಿದ್ರಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅರುಣ್ ಕಾಮತ್ ಕಾಪು, ಧರ್ಮ ಜಾಗರಣ ಮಂಗಳೂರು ವಿಭಾಗ ಸಹ ಸಂಯೋಜಕ ಕುತ್ಯಾರು ಪ್ರಸಾದ್ ಶೆಟ್ಟಿ , ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಉಚ್ಚಿಲ, ಸುಧೀರ್ ಪೂಜಾರಿ ಕಲ್ಲುಗುಡ್ಡೆ, ನಿತೇಶ್ ಎರ್ಮಾಳ್, ಗೋವರ್ಧನ್ ಭಟ್, ಪ್ರಕಾಶ್ ಕೋಟ್ಯಾನ್, ಉಡುಪಿ ಜಿ.ಪಂ. ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಶಶಿಕಾಂತ್ ಪಡುಬಿದ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಪ್ರಮುಖರಾದ ಗಂಗಾಧರ ಸುವರ್ಣ, ಕೇಸರಿ ಯುವರಾಜ್, ಅರುಣ್ ಶೆಟ್ಟಿ ಪಾದೂರು, ಸಂದೀಪ್ ಶೆಟ್ಟಿ ಕಾಪು, ಶಿವಪ್ರಸಾದ್ ಶೆಟ್ಟಿ, ರಮಾ ವೈ. ಶೆಟ್ಟಿ, ಚಂದ್ರ ಮಲ್ಲಾರು ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಮುಖಂಡ ರಮಾಕಾಂತ್ ದೇವಾಡಿಗ ಪ್ರಸ್ತಾವನೆಗೈದರು. ಭಜರಂಗದಳ ಕಾಪು ಪ್ರಖಂಡ ಸಂಚಾಲಕ ಜಯಪ್ರಕಾಶ್ ಪ್ರಭು ಮಟ್ಟಾರು ಸ್ವಾಗತಿಸಿದರು.