×
Ad

ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಎಸ್.ಡಿ.ಪಿ.ಐ ಖಂಡನೆ

Update: 2019-07-03 23:14 IST

ಪುತ್ತೂರು:- ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರದ ಪೈಶಾಚಿಕ ಕೃತ್ಯವನ್ನು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್  ಖಂಡಿಸಿದ್ದಾರೆ.

ಬುದ್ದಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯು ಹಿಂದುತ್ವ ಪ್ಯಾಶಿಷ್ಟರ ಪೈಶಾಚಿಕ ಕೃತ್ಯದಿಂದ ತಲೆತಗ್ಗಿಸುವಂತಾಗಿದೆ‌. ಗೋವು ಸಾಗಾಟ ವಿಚಾರದ ಬಗ್ಗೆ ನಕಲಿ ಪ್ರೇಮ ತೋರಿಸಿ ಜಿಲ್ಲಾಧಿಕಾರಿ ಕಚೇರಿ ಯಿಂದ ಹಿಡಿದು ಪಾರ್ಲಿಮೆಂಟ್ ವರೆಗು ಬೊಬ್ಬೆ ಹೊಡೆಯುವ ಶೋಭ ಕರಂದ್ಲಾಜೆ ಈ ಮುಗ್ಧ ಹೆಣ್ಣಿನ ನ್ಯಾಯಕ್ಕಾಗಿ ಧ್ವನಿ ಎಬ್ಬಿಸಿ ಹಿಂದುತ್ವ ಕಿರಾತಕರಿಂದ ಹೆಣ್ಣು ಮಕ್ಕಳನ್ನು ರಕ್ಷಿಸಲು ಮುಂದಾಗಲಿ ಅದು ಬಿಟ್ಟು ಜಿಲ್ಲೆಯ ಶಾಂತಿಯನ್ನು ಕದಡುವ ಹುನ್ನಾರಕ್ಕೆ ಕೈ ಹಾಕದಿರಲಿ ಎಂದಿದ್ದಾರೆ.

ಪ್ರಕರಣ ಬೆಳಕಿಗೆ ಬಂದಾಗಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ  ತಕ್ಷಣವೇ ಐದು ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ ದ.ಕ ಜಿಲ್ಲಾ ಪೊಲೀಸ್ ರ ಕಾರ್ಯ ವೈಕರ್ಯವನ್ನು ಎಸ್ಡಿಪಿಐ ಜಿಲ್ಲಾ ಸಮಿತಿಯು ಪ್ರಶಂಸಿಸುತ್ತದೆ. ಹಾಗೂ ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕೂಲಂಕುಷ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕಾಗಿ ಎಸ್ಡಿಪಿಐ ಜಿಲ್ಲಾ ಪ್ರ. ಕಾರ್ಯದರ್ಶಿ ಶಾಹುಲ್ ಎಸ್ ಎಚ್  ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News