×
Ad

ಬ್ಯಾಟ್ ನಂತರ ಈಗ ಬಕೆಟ್: ಇಂಜಿನಿಯರ್ ಮೇಲೆ ಕೆಸರು ಸುರಿದ ಕಾಂಗ್ರೆಸ್ ಶಾಸಕ!

Update: 2019-07-04 15:30 IST

ಹೊಸದಿಲ್ಲಿ, ಜು.4: ಮಧ್ಯ ಪ್ರದೇಶದಲ್ಲಿ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯ ಪುತ್ರ ಹಾಗೂ ಶಾಸಕ ಆಕಾಶ್ ವಿಜಯವರ್ಗಿಯ ಅಧಿಕಾರಿಯೊಬ್ಬರಿಗೆ ಬ್ಯಾಟ್ ನಿಂದ ಹಲ್ಲೆ ನಡೆಸಿದ ಘಟನೆ ಇನ್ನೂ ಹಸಿಯಾಗಿರುವಂತೆಯೇ ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ ಅವರ ಪುತ್ರ, ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತವರ ಬೆಂಬಲಿಗರು ಬಕೆಟ್ ನಲ್ಲಿ ಕೆಸರು ತುಂಬಿ ಹೆದ್ದಾರಿ ಇಂಜಿನಿಯರ್ ಒಬ್ಬರ ಮೈಮೇಲೆ ಸುರಿದಿದ್ದಾರೆ.

ಘಟನೆ ಗುರುವಾರ ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ಕಂಕಾವಳಿ ಸಮೀಪದ ಸೇತುವೆಯಲ್ಲಿ ನಡೆದಿದೆ. ಶಾಸಕ ಅಲ್ಲಿನ ರಸ್ತೆಯಲ್ಲಿರುವ ಹೊಂಡಗುಂಡಿಗಳನ್ನು ಪರಿಶೀಲಿಸಲು ಆಗಮಿಸಿದ್ದರು. ಸುದ್ದಿ ಸಂಸ್ಥೆ ಎಎನ್‍ಐ ಪೋಸ್ಟ್ ಮಾಡಿದ ವೀಡಿಯೋದಲ್ಲಿ ರಸ್ತೆ ಗುಂಡಿ ದುರಸ್ತಿ ವಿಚಾರದಲ್ಲಿ ಶಾಸಕ ನಿತೇಶ್ ಸಿಟ್ಟುಗೊಂಡು ತಮ್ಮ ಬೆಂಬಲಿಗರ ಜತೆ ಇಂಜಿನಿಯರ್ ಮೇಲೆ ಮಣ್ಣು ಸುರಿಯುತ್ತಿರುವುದು ಕಾಣಿಸುತ್ತದೆ.

ಪ್ರಕಾಶ್ ಶೇಡೇಕರ್ ಎಂದು ಗುರುತಿಸಲ್ಪಟ್ಟ ಇಂಜಿನಿಯರ್ ನನ್ನು ಬೆದರಿಸಿದ ಶಾಸಕನ ಗಡಣ ಅವರನ್ನು ಸೇತುವೆಗೆ ಕಟ್ಟಿ ಹಾಕಲು ಕೂಡ ಯತ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News