ಆರ್ಥಿಕತೆಯ ಕುರಿತು ಸ್ವತಃ ಸರಕಾರವೇ ಹತಾಶವಾಗಿದೆ: ಚಿದಂಬರಂ

Update: 2019-07-04 13:23 GMT

ಹೊಸದಿಲ್ಲಿ,ಜು.4: ಗುರುವಾರ ಸಂಸತ್ತಿನಲ್ಲಿ ಮಂಡಿಸಲಾದ ಮುಂಗಡಪತ್ರ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಕ್ಷೇತ್ರವಾರು ಬೆಳವಣಿಗೆಗಳನ್ನು ಬಿಂಬಿಸಲಾಗಿಲ್ಲ ಎಂದು ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು,ಆರ್ಥಿಕತೆಯ ಕುರಿತು ಸ್ವತಃ ಸರಕಾರವೇ ಹತಾಶವಾಗಿರುವಂತೆ ಕಂಡು ಬರುತ್ತಿದೆ ಎಂದರು.

ಆರ್ಥಿಕ ಸಮೀಕ್ಷೆ 2018-19 ಬೆಳಕಿಗೆ ತಂದಿರುವ ಅಂಶಗಳು ಧನಾತ್ಮಕವಾಗಿಲ್ಲ,ಉತ್ತೇಜನಕಾರಿಯೂ ಆಗಿಲ್ಲ ಎಂದರು.

ಆರ್ಥಿಕ ಸಮೀಕ್ಷೆಯಲ್ಲಿ 2019-20ರಲ್ಲಿ ಶೇ.7ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಕ್ಷೇತ್ರವಾರು ಬೆಳವಣಿಗೆ ಅಂದಾಜುಗಳನ್ನು ಬಿಂಬಿಸಲಾಗಿಲ್ಲ ಎಂದ ಚಿದಂಬರಂ,ಸಮೀಕ್ಷೆಯು ನಿಧಾನ ಬೆಳವಣಿಗೆ, ಆದಾಯದಲ್ಲಿ ಕೊರತೆ, ವಿತ್ತೀಯ ಕೊರತೆ ಗುರಿಯೊಂದಿಗೆ ರಾಜಿ ಮಾಡಿಕೊಳ್ಳದೆ ಸಂಪನ್ಮೂಲಗಳ ಅನ್ವೇಷಣೆ, ಚಾಲ್ತಿ ಖಾತೆಯ ಮೇಲೆ ತೈಲದರಗಳ ಪರಿಣಾಮ ಮತ್ತು ಕೇಂದ್ರ ಸರಕಾರದ ಹಣಕಾಸುಗಳ ಕುರಿತು 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಪ್ರಮುಖವಾಗಿ ಬೆಟ್ಟು ಮಾಡಿದೆ. ಇವ್ಯಾವೂ ಧನಾತ್ಮಕವಾಗಿಲ್ಲ, ಉತ್ತೇಜಕವೂ ಆಗಿಲ್ಲ ಎಂಬ ಆತಂಕ ತನ್ನನ್ನು ಕಾಡುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News