ಗ್ರಾಹಕರ ಕೋಟ್ಯಂತರ ರೂ.ಠೇವಣಿ ಗುಳುಂ: ಮುಝಫ್ಫರ್‌ನಗರ ಎಸ್‌ಬಿಐ ಶಾಖಾಧಿಕಾರಿ,

Update: 2019-07-04 13:31 GMT

ಮುಝಫ್ಫರ್‌ನಗರ(ಉ.ಪ್ರ),ಜು.4: ಗ್ರಾಹಕರ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಲ್ಲಿ ಮುಝಫ್ಫರ್‌ನಗರ ಜಿಲ್ಲೆಯ ಕಕರೌಲಿ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಮತ್ತು ಇತರ ನಾಲ್ವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಶಾಖಾ ವ್ಯವಸ್ಥಾಪಕ ಚಂದ್ರಮೋಹನ ಶರ್ಮಾ,ಕ್ಷೇತ್ರಾಧಿಕಾರಿ ರಾಕೇಶ ಶರ್ಮಾ,ಕ್ಯಾಷಿಯರ್‌ಗಳಾದ ವೀರಬಹಾದುರ್ ಮತ್ತು ರವೀಂದರ್ ದಯಾಳ್ ಹಾಗೂ ಕ್ಯಾಂಟೀನ್ ಗುತ್ತಿಗೆದಾರ ಮನೋಜಕುಮಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಬ್ಯಾಂಕು ಆರೋಪಿ ಅಧಿಕಾರಿಗಳನ್ನು ಕಳೆದ ವಾರ ಸೇವೆಯಿಂದ ಅಮಾನತುಗೊಳಿಸಿದೆ.

ನಕಲಿ ವೋಚರ್‌ಗಳನ್ನು ಬಳಸಿ ತಮ್ಮ ಖಾತೆಗಳಿಂದ ಹಣವನ್ನು ಹಿಂದೆಗೆಯಲಾಗಿದೆ ಎಂದು ಆರೋಪಿಸಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲವಾರು ಗ್ರಾಹಕರು ಪ್ರತಿಭಟನೆ ನಡೆಸಿದ ಬಳಿಕ ಈ ವಂಚನೆ ಬಹಿರಂಗಗೊಂಡಿದೆ.

ಎಸ್‌ಬಿಐ ತನ್ನ ಕಕರೌಲಿ ಶಾಖೆಯಲ್ಲಿನ ಎಲ್ಲ ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿದ್ದು,ಆರೋಪಗಳ ಪರಿಶೀಲನೆಗಾಗಿ ಬ್ಯಾಂಕ್ ಅಧಿಕಾರಿಗಳನ್ನೊಳಗೊಂಡ ತಂಡವೊಂದನ್ನು ರಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News