ವಿದ್ಯಾರ್ಥಿನಿಯ ಅತ್ಯಾಚಾರದ ವೀಡಿಯೊ ಹಂಚಿಕೆ ಪ್ರಕರಣ: 8 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಅಶ್ಲೀಲ ವೀಡಿಯೊ ಹಂಚಿಕೆ ಮಾಡಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸರು ಪುತ್ತೂರು ತಾಲೂಕಿನ ಕಬಕ ನಿವಾಸಿ ಚಂದ್ರಶೇಖರ ಮಯ್ಯ (47), ಕಸ್ಬಾದ ಮುರಳೀಧರ ಪರ್ಲಡ್ಕ (20), ಆರ್ಯಾಪು ಗ್ರಾಮದ ಪವನ್ ಕುಮಾರ್ ಡಿ (19), ಆರ್ಯಾಪು ಗ್ರಾಮದ ಪೂವಪ್ಪ(26) ಮತ್ತು ಕಡಬದ ಶ್ರೇಯಾನ್ಸ್(20), ಪುತ್ತೂರು ಕಸ್ಬಾ ನಿವಾಸಿಗಳಾದ ಮೋಹಿತ್(18), ಅಧ್ವಿತ್ ಕುಮಾರ್ ನಾಯ್ಕ್(19) ಮತ್ತು ಕೊಳ್ತಿಗೆ ಗ್ರಾಮದ ಧ್ಯಾನ್ ಎನ್ ಎಂಬವರನ್ನು ಐಟಿ ಕಾಯ್ದೆಯಡಿ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆರೋಪಿಗಳಿಗೆ ಒಂದು ದಿನದ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶಿಸಿತು.
ಒಂದು ದಿನದ ನ್ಯಾಯಾಂಗ ಬಂಧನಕ್ಕೆ ನೀಡಿದ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪುತ್ತೂರು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಗುರುವಾರ ಸಹಾಯಕ ಸರಕಾರಿ ಅಭೀಯೋಜಕರು ಇಲ್ಲದ ಕಾರಣ ಮತ್ತು ಆರೋಪಿತರ ಜಾಮೀನು ಅರ್ಜಿಯ ವಿಚಾರಣೆಗೆ ಅಭಿಯೋಜಕರ ಆಕ್ಷೇಪಣೆ ಅಥವಾ ವಾದ ಮಂಡನೆ ಅಗತ್ಯವಾಗಿರುವ ಹಿನ್ನಲೆಯಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.