ಸಾಮೂಹಿಕ ಅತ್ಯಾಚಾರ ಪ್ರರಕರಣ: ಆರೋಪಿಗಳ ಪರ ವಕಾಲತ್ತು ಮಾಡದಂತೆ ಶ್ರೀರಾಮಸೇನೆ ಮನವಿ

Update: 2019-07-04 16:07 GMT

ಉಡುಪಿ, ಜು.4: ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ಮಾಡಬಾರದು ಎಂದು ಉಡುಪಿ ಜಿಲ್ಲೆ ಶ್ರೀರಾಮ ಸೇನೆ ಒತ್ತಾಯಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಮಾತನಾಡಿ, ಈ ಅತ್ಯಾಚಾರ ಪ್ರಕರಣ ತೀವ್ರ ಖಂಡನೀಯ. ಈ ಕೃತ್ಯ ಇಡೀ ಸಮಾಜ ತಲೆತಗ್ಗಿಸುವಂತದ್ದಾ ಗಿದೆ. ಆದುದರಿಂದ ಆರೋಪಿಗಳ ಪರವಾಗಿ ಯಾವುದೇ ವಕೀಲರು ಕೂಡ ನ್ಯಾಯಾಲಯದಲ್ಲಿ ವಾದ ಮಾಡಬಾರದು ಎಂದು ಮನವಿ ಮಾಡಿದರು.

ಗೋ ಪ್ರೇಮಿ ಶಿವು ಉಪ್ಪಾರ ಅವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕರ್ನಾಟಕ ಇದರ ವತಿಯಿಂದ ಜು.8ರಂದು ಬೆಳಗಾವಿ ಚಲೋ ಹೋರಾಟವನ್ನು ಹಮ್ಮಿಕೊಳ್ಳ ಲಾಗಿದೆ. ಉಡುಪಿ ಜಿಲ್ಲೆಯಿಂದ ಸುಮಾರು 150 ಮಂದಿ ಈ ಹೋರಾಟ ದಲ್ಲಿ ಭಾಗವಹಿಸಲಿುವರು ಎಂದು ಅವರು ತಿಳಿಸಿದರು.

ಶ್ರೀರಾಮಸೇನೆಯ ಗೌರವಾಧ್ಯಕ್ಷ ಡಿ.ರಾಧಾಕೃಷ್ಣ ಶೆಟ್ಟಿ, ಪ್ರಮುಖರಾದ ಶರತ್ ಪೂಜಾರಿ ಮಣಿಪಾಲ, ಯಶವಂತ್ ಕಲ್ಯಾಣಪುರ, ಸುನಿಲ್ ಶೆಟ್ಟಿ ಬೈಲೂರು, ದಿನೇಶ್ ಪಾಂಗಾಳ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News