ಮಟ್ಕಾ ದಂಧೆ: ಆರೋಪಿ ಬಂಧನ
Update: 2019-07-04 22:00 IST
ಮಂಗಳೂರು, ಜು.4: ಗೂಡುಶೆಡ್ಡೆ ಬಳಿ ಹಣವನ್ನು ಪಣವಾಗಿಟ್ಟು ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಅತ್ತಾವರ ನಿವಾಸಿ ವಿಜಯ್ ಕುಮಾರ್(43) ಬಂಧಿತ ಆರೋಪಿ. ಈತನಿಂದ 8,060ರೂ. ಹಾಗೂ ಮಟ್ಕಾ ಚೀಟಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಗೂಡುಶೆಡ್ಡೆ ರಸ್ತೆ ಬದಿ ಚೌಟಾಸ್ ವೈನ್ಸ್ ಗೋಡೋನ್ ಹತ್ತಿರ ಕೇರಳ ರಾಜ್ಯ ಲಾಟರಿಯ ಬಂಪರ್ ಬಹುಮಾನ ಬರುವ ನಂಬರ್‌ನ ಕೊನೆಯ 3 ನಂಬರ್ ಮೇಲೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು ಮಟ್ಕಾ ಜೂಜಾಟ ನೆಡಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್ ಸೂಚನೆಯಂತೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಜೇಂದ್ರ ಬಿ. ಹಾಗೂ ದಕ್ಷಿಣ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.