ಮಂಗಳೂರು: ಎಐಎಂಡಿಸಿಯಿಂದ ಪತ್ರಕರ್ತರು, ಲೇಖಕರ ಸಮ್ಮಿಲನ
Update: 2019-07-04 22:18 IST
ಮಂಗಳೂರು, ಜು. 4: ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ನಗರದ ಕಂಕನಾಡಿಯಲ್ಲಿ ರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಭಾಂಗಣದಲ್ಲಿ ಗುರುವಾರ ಪತ್ರಕರ್ತರು ಹಾಗೂ ಲೇಖಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ‘ಮಸ್ಜಿದ್ ಒನ್’ನ ಉದ್ದೇಶ ಮತ್ತು ಅದರ ಅಗತ್ಯದ ಬಗ್ಗೆ ಮಾಹಿತಿ ನೀಡಿ, ಮುಸ್ಲಿಮರ ಸಬಲೀಕರಣಕ್ಕೆ ಮಸೀದಿಗಳೇ ಶಕ್ತಿ ಕೇಂದ್ರಗಳಾಗಬೇಕು. ಅದಕ್ಕಾಗಿ ‘ಮಸ್ಜಿದ್ ಒನ್’ ಸ್ಥಾಪಿಸಲಾಗಿದೆ. ಆ ಮೂಲಕ ದೇಶದ ಎಲ್ಲಾ ಮಸೀದಿಗಳ ಮಧ್ಯೆ ಸಂವಹನ ಕಲ್ಪಿಸಲು ಸಾಧ್ಯವಿದೆ. ಪ್ರತಿಯೊಂದು ಜಮಾಅತ್‌ನ ಅಧೀನದಲ್ಲಿ ನಾಲ್ಕೈದು ಸಮಿತಿಗಳು, ಕೆಲವು ಫ್ಯಾಮಿಲಿ ಟ್ರಸ್ಟ್‌ಗಳನ್ನು ರಚಿಸಬೇಕಿದೆ ಎಂದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಬೀಬ್ ಖಾದರ್ ವಂದಿಸಿದರು.