ಆಕ್ಷನ್ ಟೈಕಾಂಡೊ ರಾಜ್ಯಮಟ್ಟದ ಓಪನ್ ಚಾಂಪಿಯನ್‍ಶಿಫ್: ಪಾಣೆಮಂಗಳೂರಿನ ಮಾರ್ಷಲ್ ಆರ್ಟ್ಸ್ ಸಂಸ್ಥೆ ಸಾಧನೆ
ಬಂಟ್ವಾಳ, ಜು. 4: ಧಾರವಾಡದದಲ್ಲಿ ಇತ್ತೀಚೆಗೆ ನಡೆದ ಆಕ್ಷನ್ ಟೈಕಾಂಡೊ ರಾಜ್ಯಮಟ್ಟದ ಓಪನ್ ಚಾಂಪಿಯನ್‍ಶಿಪ್ಪಿನಲ್ಲಿ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಹಾಗೂ ಮಾರ್ಷಲ್ ಆರ್ಟ್ಸ್ ಸಂಸ್ಥೆಯ 7 ಮಂದಿ ಟ್ವೆಕಾಂಡೋ ಸ್ಪರ್ಧಾರ್ಥಿ ವಿದ್ಯಾರ್ಥಿಗಳು 4 ಚಿನ್ನ ಹಾಗೂ 3 ಬೆಳ್ಳಿ ಪದಕ ಪಡೆದು ಸಾಧನೆಗೈದಿದ್ದಾರೆ.
ಇಲ್ಲಿನ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ 10ರ ವಯೋಮಾನದ ವಿಭಾಗದಲ್ಲಿ ಮುಹಮ್ಮದ್ ಶಾಕಿಬ್ ಫೈಟಿಂಗ್‍ನಲ್ಲಿ ಚಿನ್ನ, 11ರ ವಯೋಮಾನದ ವಿಭಾಗದಲ್ಲಿ ಮುಹಮ್ಮದ್ ಹಿಶಾಂ ಕಲರ್ ಬೆಲ್ಟ್ ವಿಭಾಗದಲ್ಲಿ ಚಿನ್ನ, ಮುಹಮ್ಮದ್ ಶಾಮಿಲ್ ವೈಟ್ ಬೆಲ್ಟ್ ವಿಭಾಗದಲ್ಲಿ ಚಿನ್ನ, 12ರ ವಯೋಮಾನದ ವಿಭಾಗದಲ್ಲಿ ಮುಹಮ್ಮದ್ ಅಯಾನ್ ಫೈಟಿಂಗ್‍ನಲ್ಲಿ ಚಿನ್ನ, ಮುಹಮ್ಮದ್ ಮುಸ್ತಫಾ ವೈಟ್ ಬೆಲ್ಟ್ ವಿಭಾಗದಲ್ಲಿ ಬೆಳ್ಳಿ, 13ರ ವಯೋಮಾನದ ವಿಭಾಗದಲ್ಲಿ ಮುಹಮ್ಮದ್ ಫಾಝಿಲ್ ಕಲರ್ ಬೆಲ್ಟ್ ವಿಭಾಗದಲ್ಲಿ ಬೆಳ್ಳಿ ಹಾಗೂ 14ರ ವಯೋಮಾನದ ವಿಭಾಗದಲ್ಲಿ ಮುಹಮ್ಮದ್ ಶಿಫಾನ್ ಕಲರ್ ಬೆಲ್ಟ್ ಫೈಟಿಂಗ್‍ನಲ್ಲಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.