ದಾಂಧಲೆಗೈದ ಪ್ರತಿಭಟನಕಾರರ ಬೇಟೆ: ಹಾಂಕಾಂಗ್ ಪೊಲೀಸರ ಪಣ

Update: 2019-07-04 18:09 GMT

ಹಾಂಕಾಂಗ್, ಜು. 4: ಹಾಂಕಾಂಗ್ ಸಂಸತ್ತಿಗೆ ನುಗ್ಗಿ ಚೀನಾ ಬೆಂಬಲಿತ ಸರಕಾರಕ್ಕೆ ಅಭೂತಪೂರ್ವ ಸವಾಲಾದ ಪ್ರತಿಭಟನಕಾರರನ್ನು ಬೇಟೆಯಾಡುವುದಾಗಿ ಹಾಂಕಾಂಗ್ ಅಧಿಕಾರಿಗಳು ಬುಧವಾರ ಪಣತೊಟ್ಟಿದ್ದಾರೆ.

ಅರೆ-ಸ್ವಾಯತ್ತ ನಗರವು ಬೃಹತ್ ಸರಕಾರ ವಿರೋಧಿ ಪ್ರತಿಭಟನೆಗಳಿಂದಾಗಿ ಒಂದು ತಿಂಗಳಿನಿಂದ ಸ್ತಬ್ಧಗೊಂಡಿದೆ.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಮಾತೃ ಭೂಮಿ ಚೀನಾಕ್ಕೆ ಗಡಿಪಾರು ಮಾಡುವ ಹಾಂಕಾಂಗ್ ಸರಕಾರದ ಭಾರೀ ವಿವಾದಾಸ್ಪದ ಮಸೂದೆಯನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಹಾಂಕಾಂಗ್ ನಗರದ ಆಡಳಿವನ್ನು ಬ್ರಿಟನ್ 1997ರಲ್ಲಿ ಚೀನಾಕ್ಕೆ ಹಸ್ತಾಂತರಿಸಿದ ವಾರ್ಷಿಕ ದಿನದ ಸಂದರ್ಭದಲ್ಲಿ ಸೋಮವಾರ ಭಾರೀ ಸಂಖ್ಯೆಯ ಯುವ ಪ್ರತಿಭಟನಕಾರರು ಚೀನಾ ವಿರೋಧಿ ಪ್ರತಿಭಟನೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ. ಈ ಸಂದರ್ಭದಲ್ಲಿ ಸಂಸತ್ತಿನ ಒಳಗೆ ನುಗ್ಗಿದ ಪ್ರತಿಭಟನಕಾರರು ದಾಂಧಲೆ ನಡೆಸಿದ್ದರು.

‘‘ಜುಲೈ 1ರಂದು ಸಂಸತ್ತಿನಲ್ಲಿ ದಾಂಧಲೆಗೈದ ಪ್ರತಿಭಟನಕಾರರ ಬೆನ್ನಹಿಂದೆ ಪೊಲೀಸರು ಬಿದ್ದಿದ್ದಾರೆ. ಅವರ ಕಾನೂನುಬಾಹಿರ ಹಿಂಸಾತ್ಮಕ ಕೃತ್ಯಗಳಿಗಾಗಿ ಅವರನ್ನು ಹೊಣೆಗಾರರನ್ನಾಗಿಸಲಾಗುವುದು’’ ಎಂದು ಪೊಲೀಸರು ಪ್ರಕಟನೆಯೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News