ಪಾಕ್‌ಗೆ 6 ಬಿಲಿಯ ಡಾಲರ್ ಐಎಂಎಫ್ ಸಾಲ

Update: 2019-07-04 18:17 GMT

ವಾಶಿಂಗ್ಟನ್, ಜು. 4: ಪಾಕಿಸ್ತಾನದ ಆರ್ಥಿಕತೆಗೆ ಚೇತರಿಕೆ ನೀಡುವ ಪ್ರಯತ್ನವಾಗಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಆ ದೇಶಕ್ಕೆ ಮೂರು ವರ್ಷ ಅವಧಿಯ 6 ಬಿಲಿಯ ಡಾಲರ್ (ಸುಮಾರು 41,000 ಕೋಟಿ ರೂಪಾಯಿ) ಸಾಲ ನೀಡಲು ಬುಧವಾರ ಒಪ್ಪಿಕೊಂಡಿದೆ.

ಐಎಂಎಫ್ ಮಂಡಳಿಯ ಅನುಮೋದನೆಯೊಂದಿಗೆ, ಒಂದು ಬಿಲಿಯ ಡಾಲರ್ (ಸುಮಾರು 6,850 ಕೋಟಿ ರೂಪಾಯಿ) ಸಾಲವನ್ನು ತಕ್ಷಣ ನೀಡಲಾಗುವುದು.

ಐಎಂಎಫ್ 39 ತಿಂಗಳುಗಳ ಅವಧಿಯಲ್ಲಿ ಪಾಕಿಸ್ತಾನದ ನಿರ್ವಹಣೆಯನ್ನು ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವುದು ಹಾಗೂ ಈ ಅವಧಿಯಲ್ಲಿ ಹೆಚ್ಚುವರಿ ನಿಧಿಯನ್ನು ಬಿಡುಗಡೆ ಮಾಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News