ಮಂಗಳೂರು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡಕ್ಕೆ ದಾಳಿ; ಟ್ರಿಲ್ಲರ್ ಮೆಷಿನ್, ಲಾರಿಗಳು ವಶಕ್ಕೆ
ಮಂಗಳೂರು: ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡಕ್ಕೆ ದಾಳಿ ನಡೆಸಿ, ನಾಲ್ಕು ಟ್ರಿಲ್ಲರ್ ಮೆಷಿನ್, ನಾಲ್ಕು ಲೋಡೆಡ್ ಲಾರಿಗಳು ಸೇರಿದಂತೆ ಸುಮಾರು 31 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಡಬಿದ್ರೆ ಬಡಗಮಿಜಾರು ಗ್ರಾಮದ ಪದಮಲೆ ಮತ್ತು ಮಂಜನಬೈಲು ಎಂಬಲ್ಲಿ ಜೋಕಿಂ ಕೊರೆಯ ಮತ್ತು ಹೇಮಚಂದ್ರ, ಜಗದೀಶ್ ಎಂಬವರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಪಣಂಬೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಆರ್.ಗೌಡ ಅವರ ನೇತೃತ್ವದ ರೌಡಿ ನಿಗ್ರಹ ದಳವು ಸ್ಥಳಕ್ಕೆ ದಾಳಿ ನಡೆಸಿ ಕೆಂಪು ಕಲ್ಲುಗಳನ್ನು ಕೊರೆಯುವ 4 ಟ್ರಿಲ್ಲರ್ ಡ್ರೆಸ್ಸಿಂಗ್ ಮಷೀನ್ ಗಳನ್ನು ಮತ್ತು ಲಾರಿ ಮತ್ತು ಅವುಗಳಲ್ಲಿ ತುಂಬಿದ ಕೆಂಪು ಕಲ್ಲುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.