×
Ad

ಸೇಲ್ಸ್‌ಮನ್ ನೆಪದಲ್ಲಿ ತೊಂದರೆ ಆರೋಪ: ಎಚ್ಚರಿಕೆ ವಹಿಸಲು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಲಹೆ

Update: 2019-07-05 17:06 IST

ಮಂಗಳೂರು, ಜು. 5: ವಸ್ತುಗಳ ಮಾರಾಟ ನೆಪದಲ್ಲಿ ಮನೆಗೆ ಬರುವ ಸೇಲ್ಸ್‌ಮನ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಅನುಮಾನ, ತೊಂದರೆ ಆದಲ್ಲಿ ತಕ್ಷಣ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂಗೆ ದೂರು ನೀಡಬೇಕು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಲಹೆ ನೀಡಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಪಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಸುರತ್ಕಲ್, ತಡಂಬೈಲ್ ಸಮೀಪ ಸೇಲ್ಸ್‌ಮನ್‌ಗಳ ಹಾವಳಿ ಹೆಚ್ಚಾಗಿದ್ದು ಮನೆಗೆ ಬಂದ ಸೇಲ್ಸ್‌ಮನ್ ಒಬ್ಬ 5 ನಿಮಿಷ ಮನೆಯ ಸುತ್ತ ಸುತ್ತಾಡಿದ್ದಲ್ಲದೆ, ನೆರೆಹೊರೆಯ ಮನೆಗೆ ಹೋಗಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಕಮಿಷನರ್ ಅವರು ಮನೆಯ ಸುತ್ತ ಸುತ್ತಾಡಿ ದಾಖಲೆ ಸಿಸಿ ಕ್ಯಾಮೆರಾದಲ್ಲಿರುವ ದಾಖಲೆಯನ್ನು ಸ್ಥಳೀಯ ಠಾಣೆಗೆ ನೀಡುವಂತೆ ತಿಳಿಸಿದರು.

ನಗರದಲ್ಲಿ ವಸ್ತುಗಳ ಮಾರಾಟ ನೆಪದಲ್ಲಿ ಸೇಲ್ಸ್‌ಮನ್‌ಗಳು ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂಗೆ ದೂರು ನೀಡಿ ಎಂದು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದರು.

ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಪಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಸುರತ್ಕಲ್, ತಡಂಬೈಲ್ ಸಮೀಪ ಸೇಲ್ಸ್‌ಮನ್‌ಗಳ ಹಾವಳಿ ಹೆಚ್ಚಾಗಿದ್ದು ಮನೆಗೆ ಬಂದ ಸೇಲ್ಸ್‌ಮನ್ 5 ನಿಮಿಷ ಮನೆಯ ಸುತ್ತ ಸುತ್ತಾಡಿದ್ದ ಲ್ಲದೆ, ನೆರೆಹೊರೆಯ ಮನೆಗೆ ಹೋಗಿ ಮಹಿಳೆಯರ ಜತೆ ಅಸಭ್ಯವಾಗಿ ಮಾತನಾಡಿದ್ದಲ್ಲದೆ ನಂಬರ್ ಕೂಡಾ ಸಂಗ್ರಹಿಸಿ ಹೋಗಿದ್ದಾರೆಂದು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಅವರು ಮನೆಯ ಸುತ್ತ ಸುತ್ತಾಡಿ ದಾಖಲೆ ಸಿಸಿ ಕ್ಯಾಮೆರಾದಲ್ಲಿರುವ ದಾಖಲೆಯನ್ನು ಸ್ಥಳೀಯ ಠಾಣೆಗೆ ಒದಗಿಸುವಂತೆ ತಿಳಿಸಿದರು.

ಕಾರ್‌ಸ್ಟ್ರೀಟ್ ನಾಗರಿಕರೊಬ್ಬರು ಕರೆಮಾಡಿ, ಕೇಂದ್ರ ಸರಕಾರದ ಹೊಸ ನಿಯಮದ ಪ್ರಕಾರವೇ ವಾಹನಕ್ಕೆ ನಂಬರ್‌ಪ್ಲೇಟ್ ಹಾಕಿದ್ದು, ಅದನ್ನು ಪೊಲೀಸರು ಪರಿಶೀಲನೆ ನಡೆಸಿ ಸರಿಯಿಲ್ಲ ಹೇಳುತ್ತಿದ್ದಾರೆ ಎಂದು ದೂರಿದಾಗ, ಸಂಚಾರಿ ಎಸಿಪಿಯನ್ನು ಭೇಟಿ ಮಾಡಿ ಸಮಸ್ಯೆ ಬಗೆರಿಸಿಕೊಳ್ಳು ವಂತೆ ಸಲಹೆ ನೀಡಿದರು.

ಶಾಲಾ ವಾಹನಗಳಲ್ಲಿ ಮಿತಿಗಿಂತ ಅಧಿಕ ಮಕ್ಕಳ ಸಾಗಾಟ

ಉಳ್ಳಾಲ ಪ್ರದೇಶದಲ್ಲಿ ಶಾಲಾ ವಾಹನದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಮಕ್ಕಳನ್ನು ಕೊಂಡೊಯ್ಯುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಮುಂದುವರಿಸಲಾಗು ವುದು ಎಂದರು.

ಟಿಂಟ್ ಹಾಕಲಾದ ವಾಹನಗಳ ಬಗ್ಗೆ ಮಾಹಿತಿ ಕೊಡಿ

ನಗರದಲ್ಲಿ ಟಿಂಟ್ ಹಾಕಿ ಸಾಕಷ್ಟು ವಾಹನಗಳು ಸಂಚರಿಸುತ್ತಿವೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಈಗಾಗಲೇ ಕ್ರಮಕೈಗೊಳ್ಳಲಾಗು ತ್ತಿದ್ದು ಸಾರ್ವಜನಿಕರು ಟಿಂಟ್ ವಾಹನ ಪತ್ತೆಯಾದರೆ ಕೂಡಲೇ ಫೋಟೊ ತೆಗೆದು 9480805300ಗೆ ಕಳುಹಿಸಿ ಎಂದರು.

ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ಕುಡುಕರ ಕಾಟ !

ನಗರದ ಕೆಎಸ್ಸಾರ್ಟಿಸಿ ಬಸ್ ತಂಗುದಾಣ ಎದುರು ಬಾರ್‌ಗಳಿದ್ದು ನಿಗದಿತ ಸಮಯಕ್ಕೆ ಮುಂಚಿತವಾಗಿ ಮದ್ಯದಂಗಡಿ ತೆರೆಯಲಾಗುತ್ತಿದೆ. ಅಂಗಡಿಯ ಹೊರಗಡೆಯೇ ಕುಡಿದು ತೂರಾಡುತ್ತಾರೆ ಎಂಬ ದೂರಿಗೆ ಪೊಲೀಸ್ ಆಯುಕ್ತರು, ತಕಷಣ ಸಂಬಂದಪಟ್ಟ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಕಾವೂರು-ಬೊಂದೇಲ್‌ಗೆ ಹೋಗುವ ಪಿಟಿಸಿ ಬಸ್ ನಲ್ಲಿ ಟಿಕೇಟ್ ನೀಡುತ್ತಿಲ್ಲ, ಕೇಳಿದರೆ ಉಡಾಫೆ ಮಾತನಾಡುತ್ತಾರೆ ಎಂದು ಮಹಿಳೆಯೊಬ್ಬರು ದೂರಿದರು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದರು.

ಟೋಯಿಂಗ್ ಮಾಡುವವರಿಂದ ವಾಹನಗಳಿಗೆ ಹಾನಿ

ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಮಾಡುವುದನ್ನು ಸ್ವಾಗತಿಸುತ್ತೇನೆ. ಆದರೆ, ನಾವು ಬ್ಯಾಂಕ್ ಸಾಲ, ಚಿನ್ನ ಅಡವಿಟ್ಟು ಕಷ್ಟಪಟ್ಟು ವಾಹನ ತೆಗೆದುಕೊಳ್ತೇವೆ. ಆದರೆ ಟೋಯಿಂಗ್ ಮಾಡಿದ ವಾಹನದ ಮೇಲೆಯೇ ಕುಳಿತುಕೊಂಡು ಹೋಗುತ್ತಾರೆ. ಇದರಿಂದ ವಾಹನಕ್ಕೆ ಹಾನಿಯಾಗುತ್ತದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಇದಕ್ಕೆ ಉತ್ತರಿಸಿದ ಕಮಿಷನರ್ ಈಗಾಗಲೇ ಟೋಯಿಂಗ್ ಮಾಡುವವರ ಮೀಟಿಂಗ್ ಕರೆದು ಸೂಚನೆ ನೀಡಲಾಗಿದೆ. ಟೋಯಿಂಗ್ ವಾಹನ ವಾರೀಸುದಾರರು ಸ್ಪಾಟ್‌ನಲ್ಲೇ ಇದ್ದರೆ ದಂಡ ವಿಧಿಸಿ ವಾಹನ ಬಿಡಲು ಸೂಚನೆ ನೀಡಲಾಗಿದೆ. ಸ್ಥಳದಲ್ಲಿರದಿದ್ದರೆ ಎಚ್ಚರಿಕೆಯಿಂದ ವಾಹನವನ್ನು ಒಯ್ಯಲು ಕೂಡಾ ನಿರ್ದೇಶಿಸಲಾಗಿದೆ ಎಂದರು.

ಪುತ್ತೂರಿನಿಂದ ನಗರಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್‌ಗಳು ವಿಪರೀತ ಹೊಗೆಬಿಟ್ಟು ವಾಯುಮಾಲಿನ್ಯ ಮಾಡುತ್ತಿದ್ದು, ಅದರ ವಿರುದ್ಧ ಕ್ರಮಕೈಗೊಳ್ಳಿ ಎಂಬ ಆಗ್ರಹವೂ ಆಯುಕ್ತರಿಗೆ ವ್ಯಕ್ತವಾಯಿತು. ಈ ಬಗ್ಗೆ ಉತ್ತರಿಸಿದ ಕಮಿಷನರ್ ಸೂಕ್ತ ಕ್ರಮದ ಭರವಸೆ ನೀಡಿದರು.

ಸಮಸ್ಯೆ ಪರಿಹಾರಕ್ಕೆ ಅಭಿನಂದನೆ !

ಹಿಂದಿನ ವಾರದಲ್ಲಿ ತಾವು ನೀಡಿದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಪೊಲೀಸರು ಹಾಗೂ ಪೊಲೀಸ್ ಆಯುಕ್ತರಿಗೆ ಸಾರ್ವಜನಿಕರು ಕರೆ ಮಾಡಿ ಅಭಿನಂದನೆ, ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗದ ಲಕ್ಷ್ಮೀಗಣೇಶ್, ಸಂಚಾರ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಪೂವಪ್ಪ, ಎಚ್‌ಸಿ ಪುರುಷೋತ್ತಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News