ವಿಶ್ವಕಪ್: ಬಾಂಗ್ಲಾಕ್ಕೆ 316 ರನ್ ಗುರಿ ನೀಡಿದ ಪಾಕ್

Update: 2019-07-05 13:34 GMT
ಇಮಾಮ್‌ವುಲ್ ಹಕ್ ಶತಕ

ಲಂಡನ್, ಜು.5: ಆರಂಭಿಕ ಆಟಗಾರ ಇಮಾಮ್‌ವುಲ್ ಹಕ್ ಶತಕ ಹಾಗೂ ಬಾಬರ್ ಆಝಂ ಅರ್ಧಶತಕದ ಕೊಡುಗೆ ನೆರವಿನಿಂದ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್‌ನ 43ನೇ ಪಂದ್ಯದಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 315 ರನ್ ಗಳಿಸಿದೆ.

ಟಾಸ್ ಜಯಿಸಿದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

 ಪಾಕ್ ತಂಡ 23 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್‌ನ್ನು ಕಳೆದುಕೊಂಡಿತು. ಆಗ 2ನೇ ವಿಕೆಟ್ ಜೊತೆಯಾಟದಲ್ಲಿ 157 ರನ್ ಗಳಿಸಿದ ಇಮಾಮ್‌ವುಲ್ ಹಕ್(100, 100 ಎಸೆತ, 7 ಬೌಂಡರಿ) ಹಾಗೂ ಬಾಬರ್ ಆಝಂ(96, 98 ಎಸೆತ, 11 ಬೌಂಡರಿ)ತಂಡವನ್ನು ಆಧರಿಸಿದರು.

ಆಝಂ ಶತಕ ವಂಚಿತರಾಗಿ ಪೆವಿಲಿಯನ್ ಸೇರಿದಾಗ ಹಫೀಝ್(27) ಜೊತೆ ಕೈ ಜೋಡಿಸಿದ ಹಕ್ 4ನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಗಳಿಸಿದರು.

  ಆದರೆ ಈ ಎರಡು ಜೊತೆಯಾಟದ ಬಳಿಕ ಪಾಕಿಸ್ತಾನ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಮುಸ್ತಫಿಝರ್ರಹ್ಮಾನ್(5-75) ಹಾಗೂ ಸೈಫುದ್ದೀನ್(3-77) ಪಾಕಿಸ್ತಾನವನ್ನು ಕಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News