×
Ad

ಜು.12ರಿಂದ ಬೊಜ್ಜು ನಿವಾರಣಾ ಶಿಬಿರ

Update: 2019-07-05 21:22 IST

ಉಡುಪಿ, ಜು.5: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯ ವತಿಯಿಂದ ಬೊಜ್ಜು ನಿವಾರಣೆ ಹಾಗೂ ಆರೋಗ್ಯ ಸಂರಕ್ಷಣಾ ಶಿಬಿರವು ಜು.12ರಿಂದ 19ರವರೆಗೆ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರಕ್ಕೆ ಹೊರ ರೋಗಿ ಮತ್ತು ಒಳರೋಗಿ ವಿಭಾಗಗಳೆರಡರ ಮೂಲಕವೂ ಪಾಲ್ಗೊಳ್ಳಬಹುದಾಗಿದೆ. ಈ ವಿಶೇಷ ಶಿಬಿರವನ್ನು ಆಕರ್ಷಕ ಶುಲ್ಕ ಮಿತಿ ಯೊಂದಿಗೆ ಹಮ್ಮಿಕೊಂಡಿದ್ದು, ವಿವಿಧ ಆಯುರ್ವೇದ ಚಿಕಿತ್ಸೆಗಳನ್ನು ಇದು ಒಳಗೊಂಡಿದೆ.

ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ ದೂರವಾಣಿ ಸಂಖ್ಯೆ: 0820-2533300, 2533301, 2533302, 2533303ನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News