ಮಟ್ಕಾ: ಮೂವರ ಬಂಧನ

Update: 2019-07-05 16:37 GMT

ಉಡುಪಿ, ಜು.5: ಬೀಡಿನಗುಡ್ಡೆ ಜಂಕ್ಷನ್ ಬಳಿ ಜು.4ರಂದು ಸಂಜೆ ವೇಳೆ ಮಟ್ಕ್ಕಾ ಜುಗಾರಿ ನಡೆಸುತ್ತಿದ್ದ ಹನುಮಂತ ನಗರದ ದೀಕ್ಷಿತ್ ಪೂಜಾರಿ(22) ಹಾಗೂ ಅಂಬಾಗಿಲು ಕಕ್ಕುಂಜೆಯ ದಿನೇಶ್ ಪೂಜಾರಿ(30) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು 2,235ರೂ. ನಗದು ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂದಾಪುರ: ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಜು.4ರಂದು ಮಟ್ಕಾ ಜುಗಾರಿ ನಡೆಸುತ್ತಿದ್ದ ಬಸ್ರೂರು ಮೂರುಕೈಯ ಪ್ರಜ್ವಲ್ ಕೆ.(21) ಎಂಬಾತ ನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು 1,050 ರೂ. ನಗದು ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News