×
Ad

ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಶೂನ್ಯ‌ ಕೊಡುಗೆ: ಸಚಿವ ಖಾದರ್

Update: 2019-07-05 22:10 IST

ಮಂಗಳೂರು: ಕೇಂದ್ರ ಬಜೆಟ್ ಜನಸಾಮಾನ್ಯರನ್ನು ನಿರಾಶೆಗೊಳಿಸಿದ ಅತ್ಯಂತ ಕಳಪೆ ಬಜೆಟ್. ರಾಜ್ಯಕ್ಕೆ ಯಾವೊಂದು ಹೊಸ ಕೊಡುಗೆ ನೀಡದೆ ಜನರನ್ನು ವಂಚಿಸಿವೆ. ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಹೊಂದಿದ್ದರೂ ರಾಜ್ಯಕ್ಕೆ ಹೊಸ ಯೋಜನೆ ಪ್ರಕಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಚಿವ ಯುಟಿ ಖಾದರ್ ತಿಳಿಸಿದ್ದಾರೆ. 

ಪ್ರಧಾನಿ‌ ಮೋದಿ ಶೂನ್ಯ ಕೊಡುಗೆ ನೀಡುವ ಮೂಲಕ ಜನರ‌ ‌ನಿರೀಕ್ಷೆ ಹುಸಿಗೊಳಿಸಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ. ಯಾವೊಂದು ಯೋಜನೆಗೂ ಸ್ಪಷ್ಟತೆ ಇಲ್ಲ. ಒಟ್ಟಿನಲ್ಲಿ ಇದು ಹುಸಿ ಬಜೆಟ್ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News