×
Ad

ಹಜ್‌ಯಾತ್ರೆಗೆ ತೆರಳುವ ಅಬ್ದುಲ್ ಮಜೀದ್ ಮದನಿಗೆ ಬೀಳ್ಕೊಡುಗೆ

Update: 2019-07-05 22:32 IST

ಮಂಗಳೂರು, ಜು.5: ಪವಿತ್ರ ಹಜ್ ಯಾತ್ರೆಗೆ ತೆರಳುವ ಖತೀಬ್ ಉಸ್ತಾದ್ ಅಬ್ದುಲ್ ಮಜೀದ್ ಮದನಿ ಹಾಗೂ ಸದರ್ ಉಸ್ತಾದ್ ಮುಹ್ಯುದ್ದೀನ್ ಮುಸ್ಲಿಯಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಕೋಡಿ ಉಳ್ಳಾಲ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

 ಮುಖ್ಯಅತಿಥಿಗಳಾಗಿ ಉಳ್ಳಾಲ ನಗರಸಭೆ ಸದಸ್ಯರಾದ ಅಝೀಝ್, ರಮೀಝ್, ಮುಹಮ್ಮದ್ ಮುಕ್ಕಚ್ಚೇರಿ, ಬಶೀರ್, ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಸದಸ್ಯ ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು.

ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ ಮಸೀದಿ ಕೋಡಿ ಉಳ್ಳಾಲದ ಉಮ್ಮರ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು.

ಸೈಯದ್ ಮದನಿ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಸೈಯದ್ ಮದನಿ ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ದರ್ಗಾ ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್ ತೋಟ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಹಾಜಿ ಎ.ಕೆ. ಮೊಯಿದಿನ್, ಉಳ್ಳಾಲ ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯು.ಕೆ. ಯೂಸುಫ್, ಪೇಟೆ ಜುಮಾ ಮಾಸೀದಿ ಅಧ್ಯಕ್ಷ ಹಾಜಿ ಮೊಯಿದಿನಬ್ಬ, ಬದ್ರಿಯಾ ಜುಮಾ ಮಸೀದಿ ಕೋಡಿ ಉಳ್ಳಾಲ ಅಧ್ಯಕ್ಷ ಅಬ್ದುಲ್ ಹಮೀದ್ ಎ.ಆರ್., ಮಾಜಿ ಅಧ್ಯಕ್ಷ ಅಶ್ರಫ್, ಉಪಾಧ್ಯಕ್ಷ ಯು.ಸಿ.ಖಾಸಿಂ, ಖಜಾಂಜಿ ಮೂಸ ಕುಂಞಿ, ಕಾರ್ಯದರ್ಶಿ ಇಸ್ಮಾಯೀಲ್, ಜೊತೆ ಕಾರ್ಯದರ್ಶಿ ಮುಹಮ್ಮದ್‌ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭೆ ಸದಸ್ಯ ಅಯ್ಯೂಬ್ ಯು.ಪಿ. ಮಂಚಿಲ ಸ್ವಾಗತಿಸಿದರು. ಮುಹ್ಯದ್ದೀನ್ ಜುಮಾ ಮಸೀದಿ ಇಮಾಮ್ ಲತೀಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News