ಗುರುಪುರ: ಸಾಂಪ್ರದಾಯಿಕ ನಾಟಿಗಾಗಿ ನೇಜಿ
Update: 2019-07-05 22:35 IST
ಮಂಗಳೂರು, ಜು.5: ನಗರದ ಹೊರವಲಯ ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ (ಮುಂಡಿತ್ತಾಯ) ಧೂಮಾವತಿ ದೈವಸ್ಥಾನದ ಭಂಡಾರದ ಮನೆಗೆ(ಬದಿನಮನೆ) ಸೇರಿದ ನಾಲ್ಕು ಎಕರೆ ಭತ್ತದ ಗದ್ದೆಯಲ್ಲಿ ಶುಕ್ರವಾರ ಸಾಂಪ್ರದಾಯಿಕ ನಾಟಿಗಾಗಿ ನೇಜಿ ತೆಗೆಯುವ ಹಾಗೂ ಗದ್ದೆ ಉಳುಮೆ ಕಾರ್ಯ ಆರಂಭಗೊಂಡಿತು.
ಮುಂಡಿತ್ತಾಯ ದೈವ ಪಾತ್ರಿಯಾಗಿರುವ ಭಂಡಾರದ ಮನೆಯ ತಿಮ್ಮ ಪೂಜಾರಿ ಯಾನೆ ಚಂದ್ರಹಾಸ ಕೌಡೂರು (ಅಡ್ವೊಕೇಟ್) ಮುಂದಾಳತ್ವ ದಲ್ಲಿ ದೈವಸ್ಥಾನದ ಪಕ್ಕದಲ್ಲಿರುವ ‘ದೊಂಪದ ಬಲಿ’ ಗದ್ದೆಯಲ್ಲಿ ಕುಡುಬಿ ಮಹಿಳೆಯರು ನೇಜಿ ಕೀಳುತ್ತಿದ್ದು, ಪಕ್ಕದಲ್ಲಿ ನಾಟಿಗಾಗಿ ಟಿಲ್ಲರಿನಲ್ಲಿ ಉಳುಮೆ ಕಾರ್ಯ ನಡೆಯಿತು.
ಗದ್ದೆಯಲ್ಲಿ ಸಂಪ್ರದಾಯದಂತೆ ನೇಜಿ ನೆಡುವ ಕಾರ್ಯ ನಡೆಯಲಿದ್ದು, ಈ ಸಂದರ್ಭ ಚಂದ್ರಹಾಸರೊಂದಿಗೆ ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಪದ್ಮನಾಭ ಪೂಜಾರಿ, ನಾರಾಯಣ ಪೂಜಾರಿ ಹಾಗೂ ಹಸನಬ್ಬ ಬ್ಯಾರಿ, ಪ್ರಶಾಂತ್ ಮುಂಡ ಮತ್ತಿತರರಿದ್ದರು.