ಟ್ಯುನೀಶಿಯ ಕರಾವಳಿಯಲ್ಲಿ ದೋಣಿ ಮಗುಚಿ 80 ವಲಸಿಗರ ಸಾವು?

Update: 2019-07-05 17:28 GMT

ಟ್ಯೂನಿಸ್ (ಟ್ಯುನೀಶಿಯ), ಜು. 5: ಲಿಬಿಯದಿಂದ ಇಟಲಿಗೆ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಟ್ಯುನೀಶಿಯ ಕರಾವಳಿಯ ಸಮುದ್ರದಲ್ಲಿ ಮಗುಚಿದ ದುರಂತದಲ್ಲಿ 80ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಟ್ಯುನೀಶಿಯದ ತಟ ರಕ್ಷಣಾ ಪಡೆ ಗುರುವಾರ ಹೇಳಿದೆ. ನಾಲ್ವರು ವಲಸಿಗರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ.

ಮಾಲಿ ದೇಶದ ಮೂವರು ಮತ್ತು ಐವರಿ ದೇಶದ ಒಬ್ಬರನ್ನು ಬುಧವಾರ ದಕ್ಷಿಣ ಟ್ಯುನೀಶಿಯದ ಝಾರ್ಝಿಸ್ ಕರಾವಳಿ ಸಮುದ್ರದಲ್ಲಿ ರಕ್ಷಿಸಲಾಯಿತು ಎಂದು ರೆಡ್ ಕ್ರೆಸೆಂಟ್ ಹೇಳಿದೆ.

ಆದಾಗ್ಯೂ, ರಕ್ಷಿಸಲ್ಪಟ್ಟ ಐವರಿ ಪ್ರಜೆ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲಿಬಿಯ ರಾಜಧಾನಿ ಟ್ರಿಪೋಲಿಯ ಪಶ್ಚಿಮದ ಝುವಾರ ಎಂಬ ಪಟ್ಟಣದಿಂದ ಹೊರಟ ದೋಣಿಯಲ್ಲಿ 86 ವಲಸಿಗರಿದ್ದರು ಎಂದು ಬದುಕುಳಿದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News