×
Ad

ಬಾಳ್ತಿಲ ಗ್ರಾಮದಲ್ಲಿ "ಗ್ರಾಮದ ಕಡೆ ಶಾಸಕರ ನಡೆ" ಕಾರ್ಯಕ್ರಮ

Update: 2019-07-05 23:02 IST

ಬಂಟ್ವಾಳ, ಜು. 5: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಹಾಗೂ ಹೊಂದಾಣಿಕೆಯಿಮದ ಕೆಲಸ ಮಾಡಿದಾಗ ಸಾರ್ವಜನಿಕರ ಸಮಸ್ಯೆ ಪರಿವಾಗಲು ಸಾಧ್ಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಅವರು ಶುಕ್ರವಾರ ಬಾಳ್ತಿಲ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟಿಸಿ, ಬಳಿಕ ಪಂಚಾಯತ್ ಸಭಾಂಗಣದಲ್ಲಿ "ಗ್ರಾಮದ ಕಡೆ ಶಾಸಕರ ನಡೆ" ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕಾರಿಗಳು ಹಾಗೂ ಸದಸ್ಯರ ಜೊತೆ ಪ್ರತ್ಯೇಕ ಸಭೆ ನಡೆಸಿ ಬಾಕಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನರ ಸಮಸ್ಯೆಗಳ ಬಗ್ಗೆ ಶಾಸಕರು ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಕಮಲಾಕ್ಷೀ ಪೂಜಾರಿ, ತಾಪಂ ಲಕ್ಮೀಗೋಪಾಲಾಚರ್ಯ, ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಪಿ.ಎಸ್.ಮೋಹನ್, ಆನಂದ ಶೆಟ್ಟಿ, ವಿಶ್ವನಾಥ ನಾಯ್ಕ, ವಸಂತ ಸಾಲಿಯಾನ್, ಗುಲಾಬಿ, ಪುಷ್ಪಾ ಬಿ.ಶೆಟ್ಟಿ, ಜಯಶ್ರೀಗಣೇಶ್, ಶಿವರಾಜ್, ಸುಂದರ ಸಾಲಿಯಾನ್, ವೀಣಾ, ರೇಣುಕಾ, ವೆಂಕಟರಾಯ ಪ್ರಭು, ಪಂಚಾಯತ್ ರಾಜ್ ಇಂಜಿನಿಯರ್ ಪದ್ಮರಾಜ್, ಪಿಡಿಒ ಸಂಧ್ಯಾ, ಕಂದಾಯ ನಿರೀಕ್ಷಕ ರಾಮ, ಗ್ರಾಮಕರಣಿಕ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಳ್ತಿಲ ವಲಯ ಮೇಲ್ವಿಚಾರಕಿ ಶಾಲಿನಿ, ವೈದ್ಯಾಧಿಕಾರಿ ವಿಶ್ವೇಶ್ವರ ವಿ.ಕೆ., ಮೆಸ್ಕಾಂ ಜೆಇ ಸದಾಶಿವ ಜೆ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಾಲಭವನ ಮಾಜಿ ರಾಜ್ಯಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಬಿಜೆಪಿ ಪ್ರಮುಖರಾದ ಚೆನ್ನಪ್ಪ ಆರ್. ಕೋಟ್ಯಾನ್, ದಿನೇಶ್ ಅಮ್ಟೂರು, ದೇವದಾಸ ಶೆಟ್ಟಿ, ಬಿ.ಕೆ.ಅಣ್ಣಿಪೂಜಾರಿ, ಗಣೇಶ್ ರೈ ಮಾಣಿ, ಅಭಿಷೇಕ್ ರೈ ವಿಟ್ಲ, ರಾಧಾಕೃಷ್ಣ ಅಡ್ಯಂತ್ಯಾಯ, ಆನಂದ ಶಂಭೂರು, ಲೋಕಾನಂದ ಏಳ್ತಿಮಾರ್, ಸುರೇಶ್ ಶೆಟ್ಟಿ ಕಾಂಜಿಲ, ಶರತ್ ನೀರಪಾದೆ, ರಮೇಶ್ ಕುದ್ರೆಬೆಟ್ಟು, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಆಶೋಕ್, ಚಂದ್ರಶೇಖರ್ ಚೆಂಡೆ, ಲೋಹಿತಾಕ್ಷ ಬೆರ್ಕಳ, ಗಣೇಶ್ ಶೆಟ್ಟಿ ಸುಧೆಕಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News