ಕಲೆಯ ಮೂಲಕ ಮನಸ್ಸು ಕಟ್ಟುವ ಕೆಲಸ ಆಗಲಿ-ಡಾ.ಮೋಹನ್ ಆಳ್ವ

Update: 2019-07-05 17:36 GMT

ಮಂಗಳೂರು, ಜು. 5: ಜಾತಿ,ಧರ್ಮದ ಗಡಿಗಳನ್ನು ಮೀರುವ ಸಾಮರ್ಥ್ಯ ಹೊಂದಿರುವ ಕಲೆಯ ಮೂಲಕ ಜನರ ಮನಸ್ಸು ಕಟ್ಟುವ ಕೆಲಸ ಆಗಬೇಕಾಗಿದೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.

ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನ ಎಚ್‌ಪಿಸಿ ಶೆಟ್ಟಿ ಸಭಾಂಗಣದಲ್ಲಿಂದು ಹಮ್ಮಿಕೊಂಡ ಮತ್ಸ ವರ್ಣ ಕಲಾಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.ಕಲಾ ಪ್ರಕಾರಗಳಿಗೆ ಎಲ್ಲಾ ಜನರನ್ನು ಒಂದು ಕಡೆ ಸೇರಿಸುವ ಶಕ್ತಿ ಇದೆ. ಆದುರಿಂದ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಕಲೆಯ ಪೋಷಣೆ,ರಕ್ಷಣೆ, ಅಭಿವೃದ್ಧಿ ಮುಖ್ಯ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಆಸ್ಥಾನದಲ್ಲಿ ಕಲಾವಿದರಿಗೆ, ಕಲೆಗೆ ಪೋತ್ಸಾಹ ನೀಡುತ್ತಿದ್ದರು.ಈ ಗ ಈ ಕೆಲಸವನ್ನು ಅವರ ಸ್ಥಾನದಲ್ಲಿರುವ ಸರಕಾರಗಳು ಮಾಡಬೇಕಾಗಿದೆ. ಆದರೆ ಸರಕಾರದಿಂದ ನಮ್ಮ ನಿರೀಕ್ಷೆಯ ಪ್ರಕಾರ ಕಲೆ ಸಂಸ್ಕೃತಿಯ ಬೆಳವಣಿಗೆಗೆ ನ್ಯಾಯ ದೊರೆಯುತ್ತಿದೆ ಎಂದು ನಿರೀಕ್ಷೆ ಮಾಡಲಿ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕಲೆ ,ಸಾಹಿತ್ಯವನ್ನು ಉಳಿಸುವ,ಬೆಳೆಸುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.

ಎಲ್ಲಿ ಸೌಂದರ್ಯ ಪ್ರಜ್ಞೆ ಇರುತ್ತದೆಯೋ ಅಲ್ಲಿ ಕಲಾ ಪ್ರಜ್ಞೆ ಇರುತ್ತದೆ.ಅದರೊಂದಿಗೆ ರಾಷ್ಟ್ರವನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ರಾಷ್ಟ್ರ ಪ್ರಜ್ಞೆಯೂ ಇರುತ್ತದೆ.ಈ ನಿಟ್ಟಿನಲ್ಲಿ 50ವರ್ಷದ ಮೀನುಗಾರಿಕಾ ಕಾಲೇಜಿನಲ್ಲಿ ವರ್ಣ ಚಿತ್ರಕಲಾ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ವೆಂದು ಮೋಹನ್ ಆಳ್ವ ತಿಳಿಸಿದ್ದಾರೆ.ಸಮಾರಂಭದಲ್ಲಿ ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಸೆಂಥಿಲ್ ವೆಲ್ ಅಧ್ಯಕ್ಷತೆ ವಹಿಸಿದ್ದರು.

ಪ್ರಸಾದ್ ಆರ್ಟ್ ಗ್ಯಾಲರಿಯ ನಿರ್ದೇಶಕ ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.ಮೀನುಗಾರಿಕಾ ಕಾಲೇಜಿನ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಂ .ಶಿವಪ್ರಕಾಶ್ ಸ್ವಾಗತಿಸಿದರು. ಅನಂತ ಪದ್ಮ ನಾಭ ಆಚಾರ್ಯ ವಂದಿಸಿದರು.

ಡಾ.ಶಿವಕುಮಾರ್‌ಮಗಧ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಕಾಲ ನಡೆಯಲಿರುವ ಕಲಾಶಿಬಿರದಲ್ಲಿ 26 ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News