ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್: 'ಸಬಲ ಜಮಾಅತ್‍ಗಾಗಿ ಮಾದರಿ ಮಸೀದಿ' ಕಾರ್ಯಕ್ರಮ

Update: 2019-07-05 18:09 GMT

ಮಂಗಳೂರು: ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್ ದ.ಕ ಜಿಲ್ಲೆ ವತಿಯಿಂದ ಮಸ್ಜಿದ್ ಒನ್ ಮೂವ್‍ಮೆಂಟ್ ಅಂಗವಾಗಿ “ಸಬಲ ಜಮಾಅತ್‍ಗಾಗಿ ಮಾದರಿ ಮಸೀದಿ” ಕಾರ್ಯಕ್ರಮವು ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಳಕೋಡಿಯಲ್ಲಿ ನಡೆಯಿತು.

ಖತೀಬ್ ಅಬ್ದುಲ್ ರಝಾಕ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷ ಎಮ್.ಎ.ಅಹ್ಮದ್ ಬಾವ ಮಾತನಾಡುತ್ತಾ, ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯು ಬಹಳ ಚಿಂತಾಜನಕವಾಗಿದ್ದು, ಅವರು ಎಲ್ಲಾ ಸ್ತರಗಳಲ್ಲಿಯೂ ಹಿಂದುಳಿದಿದ್ದಾರೆ. ಹಾಗಾಗಿ ನಮ್ಮ ಜಮಾಅತನ್ನು ಸಂಪೂರ್ಣ ಸಬಲ ಜಮಾಅತನ್ನಾಗಿ ರೂಪಿಸುವುದೇ ಈ ಕಾರ್ಯಕ್ರಮದ ಗುರಿ ಎಂದು ಹೇಳಿದರು.

ಈ ಸಂದರ್ಭ ಹಲವು ಯೋಜನೆಗಳನ್ನು ರೂಪಿಸಲಾಯಿತು. ಮುಂದಿನ 10 ವರ್ಷಗಳಲ್ಲಿ 5000ಕ್ಕೂ ಹೆಚ್ಚು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಜಮಾಅತಿನ ವಿದ್ಯಾರ್ಥಿಗಳನ್ನ ಐ.ಪಿ.ಎಸ್. ಐ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಗೊಳಿಸುವುದು. 100% ಸಾಕ್ಷರತೆ ಜಮಾಅತ್‍ಗಾಗಿ ಸರ್ವ ಪ್ರಯತ್ನ ಮಾಡುವುದು. ಸ್ವಚ್ಚತಾ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ಹಾಗು ಇತರ ಯೋಜನೆಗಳನ್ನು ರೂಪಿಸಲಾಯಿತು.

ಮಸ್ಜಿದ್ ಒನ್ ಮೂವ್‍ಮೆಂಟ್‍ನ ತುಪೈಲ್ ಮಹಮ್ಮದ್.ಕೆ ಮಾತನಾಡಿದರು. ಈ ಸಂದರ್ಭ ಸಸಿ ನೆಡುವ ಮತ್ತು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಸೀದಿಯ ಗೌರವಾಧ್ಯಕ್ಷ ಎಮ್.ಎಚ್. ಮುಹಿಯುದ್ದೀನ್ ಮತ್ತು ಉಪಾಧ್ಯಕ್ಷ ಎ.ಕೆ ರಿಯಾಝ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಮ್ರಾನ್ ಅಡ್ಡೂರ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News