ರಾಷ್ಟ್ರಮಟ್ಟದ ಸ್ಪಾರ್ಟಿನ್ಸ್ ಕಪ್-2019 ಕರಾಟೆ ಸ್ಪರ್ಧೆ: ಉಡುಪಿ ತಂಡಕ್ಕೆ 15 ಪದಕ

Update: 2019-07-09 13:05 GMT

ಕಾಪು: ಬೆಂಗಳೂರು ಜೈನ್ ಯುನಿವರ್ಸಿಟಿ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪಾರ್ಟಿನ್ಸ್ ಕಪ್-2019 ಕರಾಟೆ ಸ್ಪರ್ಧೆಯಲ್ಲಿ ಉಡುಪಿ ತಂಡವು ಭಾಗವಹಿಸಿ 2ಚಿನ್ನ, 2 ಬೆಳ್ಳಿ, 11 ಕಂಚಿನ ಪದಕಗಳನ್ನು ಗಳಿಸಿದೆ.

ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ನಿತಿನ್ ಶೆಟ್ಟಿ (1 ಚಿನ್ನ), ಮೆಡ್ಲಿನ್ ಪಿ.ಯು ಕಾಲೇಜಿನ ಪ್ರಣಯ್ ವಿ. ಪುತ್ರನ್ (1ಚಿನ್ನ), ಕಾಪು ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಫಾತಿಮಾ ಸದಾಫ್ (1ಬೆಳ್ಳಿ, 1 ಕಂಚು), ಅಬ್ದುಲ್ ಅನಾನ್ (2 ಕಂಚು), ಕುಂದಾಪುರ ವೆಂಕಟರಮಣ ಪಿ.ಯು ಕಾಲೇಜಿನ ಮೊಹಮ್ಮದ್ ಅಫ್ವಾನ್ (1 ಬೆಳ್ಳಿ), ಶಿರ್ವ ಫೈಝಲ್ ಆಂಗ್ಲ ಮಾಧ್ಯಮ ಶಾಲೆಯ ಅಬ್ದುಲ್ ಸಮಿ ರಿಯಾಝ್ (2 ಕಂಚು), ಕುಂದಾಪುರ ಬ್ಯಾರಿಸ್ ಸಿ ಸೈಡ್ ಪಬ್ಲಿಕ್ ಸ್ಕೂಲ್‍ನ ಮೊಹಮ್ಮದ್ ಅಝೀಮ್ ಖಾನ್ (1 ಕಂಚು), ಚಂದ್ರನಗರ ಕ್ರೆಸೆಂಟ್ ಇಂಟರ್ ನ್ಯಾಷನಲ್ ಸ್ಕೂಲ್‍ನ ಅಬ್ದುಲ್ ಹಾದಿ (1 ಕಂಚು), ಮೊಹಮ್ಮದ್ ಸಾಯಿದ್ (1 ಕಂಚು), ಮೊಹಮ್ಮದ್ ನೈಫ್ (1 ಕಂಚು), ಮೊಹಮ್ಮದ್ ಇಬ್ರಾಹಿಂ ಆದಿಲ್ (1ಕಂಚು), ಅಬ್ದುಲ್ ಮೊಹಮ್ಮದ್ ರಿಝ್ವಾನ್ (1 ಕಂಚು) ಪಡೆದಿದ್ದಾರೆ.

ಜಪಾನ್ ಶೊಟೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗನೈಸೇಶನ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಮುಖ್ಯ ಪರೀಕ್ಷಕ ಮತ್ತು ಶಿಕ್ಷಕ ಶಂಶುದ್ದೀನ್ ಎಚ್. ಶೇಕ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದು,ಯಜ್ಞೇಶ್ ಹೆಗಡೆ ಶಂಕರಪುರ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News