×
Ad

ಶೈಕ್ಷಣಿಕ ಸಾಮಾಜಿಕ ಸಾಧನೆ ಜೊತೆಗೆ ದೇಶಸೇವೆ ಅಗತ್ಯ: ಸೋಮಭಾಯಿ ಮೋದಿ

Update: 2019-07-09 20:50 IST

ಬಂಟ್ವಾಳ, ಜು. 9: ಪ್ರಸಕ್ತ ಹಿಂದುಳಿದ ವರ್ಗ ಸಮಾಜದಲ್ಲಿ ಗುರುತಿಸಿಕೊಂಡಿರುವ ಗಾಣಿಗರು ಸಂಘಟಿತರಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಸಾಧನೆ ಜೊತೆಗೆ ರಾಜಕೀಯವಾಗಿಯೂ ಬೆಳೆಯಬೇಕು ಎಂದು ಪ್ರಧಾನಿ ಸಹೋದರ ಸೋಮಭಾಯಿ ಮೋದಿ ಹೇಳಿದ್ದಾರೆ.

ಇಲ್ಲಿನ ಪಾಣೆಮಂಗಳೂರು ಗಾಣಿಗ ಸೌಧಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.

ದೇಶಸೇವೆಯಲ್ಲಿ ಕೂಡಾ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಲ್ಲಿನ ಗಾಣಿಗ ಸಮಾಜವು ಸ್ವಂತ ಸಮುದಾಯ ಭವನ ಮತ್ತು ಸಹಕಾರಿ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು. ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಗಾಣಿಗ ಸಂಘ ಮತ್ತು ಸುಮಂಗಲಾ ಕ್ರೆಡಿಟ್ ಸೊಸೈಟಿ ವತಿಯಿಂದ ಸೋಮಭಾಯಿ ಮೋದಿ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಗಾಣಿಗ, ಕಾರ್ಯದರ್ಶಿ ಮಹೇಶ ತುಪ್ಪೆಕಲ್ಲು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಬಂಧಿ ಲಲಿತಾ ಮತ್ತಿತರರು ಶುಭ ಹಾರೈಸಿದರು. 

ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ, ಎಡಪದವು ಗಾಣಿಗ ಸಂಘದ ಅಧ್ಯಕ್ಷ ಭಾಸ್ಕರ ಎಸ್. ಎಡಪದವು, ಸಂಘದ ಪ್ರಮುಖರಾದ ತಿಮ್ಮಪ್ಪ ಸಪಲ್ಯ ಇಡ್ಕಿದು, ದಿನೇಶ ಬೋಳಂತೂರು, ಕಮಲಾಕ್ಷ ನರಿಕೊಂಬು, ಲತಾ ಮೆಲ್ಕಾರ್, ಸಂದೀಪ್ ಮಾರ್ನಬೈಲು, ವೇದವ ಗಾಣಿಗ, ಈಶ್ವರ ಮೆಲ್ಕಾರ್, ಎಂ.ಎನ್.ಮೆಲ್ಕಾರ್, ದಾಮೋದರ ಮೆಲ್ಕಾರ್, ಪದ್ಮನಾಭ ಪಜೀರು, ವಿಠಲ ಸಪಲ್ಯ ವಿಟ್ಲ, ಕೃಷ್ಣಪ್ಪ ಗಾಣಿಗ, ತಾರನಾಥ, ವೀಣಾ ವಿಶ್ವನಾಥ್, ಉಷಾ ವಿಟ್ಲ, ವಸಂತ ಮತ್ತಿತರರು ಹಾಜರಿದ್ದರು.

ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ನಿರ್ದೇಶಕ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ನಾಗೇಶ ಕಲ್ಲಡ್ಕ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News