×
Ad

ಪಾರ್ಕ್ ಮಾಡಿದ ಬೈಕ್ ಕಳವು

Update: 2019-07-09 22:39 IST

ಉಡುಪಿ, ಜು.9: ಶಿವಳ್ಳಿ ಗ್ರಾಮದ ಕೈಗಾರಿಕಾ ವಲಯದಲ್ಲಿ ಎಂಟಿಎಲ್ ಗ್ರೂಪ್‌ನ ಪ್ಲಾಟ್ ಬಳಿ ಪಾರ್ಕ್ ಮಾಡಿದ್ದ ಬೈಕ್‌ನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಚೆನ್ನಗೊಂಡ ನಿವಾಸಿ ಮಹೇಶ್ ಸಿ.ಜಿ. ಅವರಿಗೆ ಸೇರಿದ ಬಜಾಜ್ ಡಿಸ್ಕವರಿ ಬೈಕ್ ಕಳವಾಗಿದ್ದು, ರವಿವಾರ ರಾತ್ರಿ 8 ಗಂಟೆಗೆ ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದರು. ಸೋಮವಾರ ಕೆಲಸ ಮುಗಿಸಿ ಹಿಂದೆ ಬಂದು ನೋಡುವಾಗ ಬೈಕ್ ಕಳವಾಗಿತ್ತು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News