ಗಾಂಜಾ ಮಾರಾಟ: ಓರ್ವನ ಬಂಧನ, 2.10 ಕೆ.ಜಿ. ಗಾಂಜಾ ವಶ
Update: 2019-07-09 22:41 IST
ಉಡುಪಿ, ಜು.9: ಮಣಿಪಾಲ ವಿದ್ಯಾರತ್ನನಗರ ವಸತಿ ಸಮುಚ್ಛಯವೊಂದರ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಾಸ್ತಾನದ ಗುಂಡ್ಮಿ ಗ್ರಾಮದ ಹದ್ದಿನಬೆಟ್ಟು ನಿವಾಸಿ ಶ್ರೀನಾಥ (28) ಬಂಧಿತ ಆರೋಪಿಯಾಗಿದ್ದು, 50 ಸಾವಿರ ರೂ. ವೌಲ್ಯದ ಸುಮಾರು 2.10 ಕೆ.ಜಿ. ಗಾಂಜಾವನ್ನು ಆತನಿಂದ ವಶಕ್ಕೆ ಪಡೆದಿದ್ದಾರೆ.
ಆರೋಪಿ ಶ್ರೀನಾಥ ಶಿವಳ್ಳಿಯ ವಸತಿ ಸಮುಚ್ಛಯದ ಸಾರ್ವಜನಿಕ ಸ್ಥಳದಲ್ಲಿ ಸೋಮವಾರ ಮಧ್ಯಾಹ್ನ 2:15ಕ್ಕೆ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ ಅಪರಾಧ ಪೊಲೀಸ್ ಠಾಣೆ ನಿರೀಕ್ಷಕ ಸೀತಾರಾಮ ಪಿ. ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ 2.10 ಕೆ.ಜಿ. ಗಾಂಜಾ ಹಾಗೂ ಮೊಬೈಲ್ ಫೋನ್ ಹಾಗೂ 2 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.