ಚಾರಣ ಪ್ರೀಯರಿಗೆ ನೇಪಾಲ ರಮಣೀಯ ಪ್ರದೇಶ-ಪುರ್ಬಾ ಶರ್ಮಾ
ಮಂಗಳೂರು, ಜ.9: ನೇಪಾಲದ ಸಾಂಸ್ಕೃತಿಕ ಹಿರಿಮೆಯನ್ನು ತಿಳಿಯಲು ನೇಪಾಳಕ್ಕೆ ಭೇಟಿ ನೀ ಡಿ ತಿಳಿಯಬೇಕು .ಚಾರಣ ಪ್ರೀಯರಿಗೆ ನೇಪಾಲ ದಕ್ಷಿಣ ಏಷ್ಯಾದ ಅತ್ಯಂತ ರಮನೀಯವಾದ ದೇಶವಾಗಿದೆ ನೇಪಾಲ ಚಾರಣ ತಂಡ (ಎಸ್.ಎನ್ ಟ್ರಕ್ಕಿಂಗ್ ಸಂಸ್ಥೆಯ ) ನಿರ್ದೇಶಕ ಪುರ್ಬಾ ಶೇರ್ಫಾ ತಿಳಿಸಿದ್ದಾರೆ.
ನಗರದ ಹೊಟೇಲ್ ಗೇಟ್ ವೇ ಸಭಾಂಗಣದಲ್ಲಿಂದು ಚಾರಣಾ ಸಕ್ತರ ಸಹಯೋದೊಂದಿಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಇಂದು ಹಮ್ಮಿಕೊಂಡ ಸಂವಾದ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸುಮಾರು 29.3ಮಿಲಿಯ ಜನಸಂಖ್ಯೆನ್ನು ಹೊಂದಿರುವ ನೇಪಾಲದಲ್ಲಿ ನೂರಾರು ವಿವಿಧ ಸಂಸ್ಕೃತಿಯನ್ನು ಹೊಂದದಿರುವ ಸಮುದಾಯಗಳಿವೆ ಅವುಗಳಲ್ಲಿ ಶೇರ್ಪಾ ಒಂದು ತೇನ್ ಸಿಂಗ್ ಈ ಸಮುದಾಯಕ್ಕೆ ಸೇರಿದವರು.ಶೇರ್ಪಾ ಸಮುದಾಯ ಚಾರಣದ ಕೆಲಸದಲ್ಲಿ ನೆರವಾಗುತ್ತಾರೆ. ನೇಪಾಲದ ಭೌಗೋಳಿಕ ಇತಿಹಾಸವನ್ನು ನೋಡಿದಾಗ ಶೇ 15ರಷ್ಟು ಬೆಟ್ಟಗಳು ,ಶೇ 75ರಷ್ಟು ಕಲ್ಲುಗಳಿಂದ ಕೂಡಿದ ಬೆಟ್ಟಗಳು ಮತ್ತು ಶೇ 10ರಷ್ಟು ಭೂಭಾಗ ಮಾತ್ರ ಸಮತಟ್ಟಾದ ಪ್ರದೇಶವನ್ನು ಹೊಂದಿದೆ ಎಂದು ಪುರ್ಬಾ ಶೇರ್ಫಾ ತಿಳಿಸಿದ್ದಾರೆ.
ನೇಪಾಲದಲ್ಲಿ ಮಾರ್ಚ್‌ನಿಂದ ಎಪ್ರಿಲ್,ಸಪ್ಟೆಂಬರ್ ನಿಂದ ನವೆಂಬರ್ ತಿಂಗಳು ಚಾರಣ ಪ್ರೀಯರಿಗೆ ಹೆಚ್ಚು ಸೂಕ್ತ ಕಾಲ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಸವಿರುವ ನೇಪಾಲದಲ್ಲಿ ಉತ್ತಮವಾದ ಟ್ರಕ್ಕಿಂಗ್ ವ್ಯವಸ್ಥೆಯನ್ನು ರೂಪಿಸಲು ಸಹಕರಿಸುವ ನೊಂದಾಯಿತ ಸಂಸ್ಥೆಗಳಿವೆ. ಇವುಗಳು ವಿಮಾ ಸೌಲಭ್ಯ, ಆರೋಗ್ಯ ಸುರಕ್ಷತೆಗಳ ಸಹಾಯ ಉತ್ತಮ ವಸತಿ, ಚಾರಣದ ಸಲಕರಣೆಗಳನ್ನು ಒದಗಿಸುತ್ತದೆ ಎಂದು ಪುರ್ಬಾ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಯತೀಶ್ ಬೈಕಂಪಾಡಿ,ನರೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.