ಬೆಳ್ತಂಗಡಿ: ಬಸ್‍ನಿಂದ ಬಿದ್ದು ನಿರ್ವಾಹಕ ಮೃತ್ಯು
Update: 2019-07-09 22:44 IST
ಬೆಳ್ತಂಗಡಿ: ಗುರುವಾಯನಕೆರೆ ಬಸ್ ನಿಲ್ದಾಣ ಸಮೀಪ ಸೋಮವಾರ ಬಸ್‍ನಿಂದ ನಿರ್ವಾಹಕ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.
ಮೂಲತಃ ಸಾಗರದ ಚೂರಿಕಟ್ಟೆ ಸಾಲಗೊಪ್ಪ ನಿವಾಸಿ ಶ್ರೀನಿವಾಸ್ ಎಸ್. (54) ಮೃತಪಟ್ಟವರು. ಬೆಳ್ತಂಗಡಿಯಿಂದ ಮೂಡುಬಿದರೆಗೆ ತೆರಳುವ ಖಾಸಗಿ ಬಸ್ ಗುರವಾಯನಕೆರೆ ಬಸ್‍ನಿಲ್ದಾಣದಲ್ಲಿ ಪ್ರಾಯಾಣಿಕರನ್ನು ಇಳಿಸಿ, ನಿರ್ವಾಹಕ ಸೂಚನೆಯಿಲ್ಲದೆ ಚಾಲಕ ಏಕಾಏಕಿ ಬಸ್ ಚಲಾಯಿಸಿದ್ದರಿಂದ ಕೈ ತಪ್ಪಿ ನಿರ್ವಾಹಕ ಶ್ರೀನಿವಾಸ್ ನೆಲಕ್ಕೆ ಅಪ್ಪಳಿಸಿದ್ದಾರೆ. ಈ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸಲಾದರು ಅದಾಗಲೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ನಿರ್ಲಕ್ಷ್ಯದ ಚಾಲನೆ ವಿರುದ್ಧ ಚಾಲಕ ಮುಲ್ಕಿ ನಿವಾಸಿ ಮುಸ್ತಾಫ (29) ವಿರುದ್ಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.