×
Ad

ಕೋಡಿ: ಬ್ಯಾರೀಸ್ ಪಪೂ ಕಾಲೇಜಿನಲ್ಲಿ ಹದಿಹರೆಯದ ಶಿಕ್ಷಣ ವಿಶೇಷ ಉಪನ್ಯಾಸ

Update: 2019-07-10 14:43 IST

ಕುಂದಾಪುರ, ಜು.10: ಕೋಡಿಯ ಹಾಜಿ ಕೆ.ಮೊಹಿದ್ದಿನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹದಿಹರೆಯದ ಶಿಕ್ಷಣ ವಿಶೇಷ ಉಪನ್ಯಾಸ ನೆರವೇರಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಎ.ಬಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಸೌಜನ್ಯ ಕರುಣಾಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಕ್ಷಣಗಳು, ಕೆಡುಕುಗಳಿಗೆ ಎಡೆಕೊಡದೆ ನಿಶ್ಚಿತ ಗುರಿಯೊಂದಿಗೆ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಶುಭ ಹಾರೈಸಿದರು.

ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಫಾತಿಮಾ ನವಾಲ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವ್ಯಾ ಕೊಟಗಿ ವಂದಿಸಿದರು. ವಿದ್ಯಾರ್ಥಿನಿ ಸಲ್ಮಾ ನದಾಫ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀಕಾಂತ ಕಾರ್ಯಕ್ರಮ ಸಂಘಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News