×
Ad

ಇಸ್ರೆಲ್‌ನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ವಾಪಸಾಗುತ್ತಿದ್ದ ವ್ಯಕ್ತಿ ಮೃತ್ಯು

Update: 2019-07-10 21:45 IST

ಮಂಗಳೂರು, ಜು.10: ಇಸ್ರೇಲ್‌ನಲ್ಲಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರಿನ ವಿಲಿಯಂ ಫೆರ್ನಾಂಡಿಸ್(49) ಮೃತರು ಎಂದು ಗುರುತಿಸಲಾಗಿದೆ.

ಇಸ್ರೆಲ್‌ನ ಟೆಲ್ ಅವಿವ್‌ನಲ್ಲಿ ಉದ್ಯೋಗದಲ್ಲಿದ್ದ ಅವರು, ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಹೊರಟು ಜು.9ರಂದು ಬೆಳಗ್ಗೆ ಮುಂಬೈ ವಿಮಾನಕ್ಕೆ ತಲುಪಿದ್ದು, ಅಲ್ಲಿಂದ ಮಂಗಳೂರು ವಿಮಾನ ಹತ್ತಲು ಸಿದ್ಧತೆ ನಡೆಸುತ್ತಿದ್ದಾಗ ಘಟನೆ ಸಂಭವಿಸಿದೆ.

ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಮಂಗಳೂರು ಕಡೆ ಪ್ರಯಾಣಿಸುವವರಿಗೆ ಸಂಬಂಧಿಸಿ ಮಿತಿ ಮೀರಿದ ಬುಕಿಂಗ್ ಆದ ಕಾರಣ ವಿಲಿಯಂ ಫೆರ್ನಾಂಡಿಸ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಲಾಗಿತ್ತು. ಹಾಗಾಗಿ ತೀವ್ರ ಅಸ್ವಸ್ಥರಾದ ಅವರು ಸಾವನ್ನಪ್ಪಿದರು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News