‘ಬೊಗಸೆಯಲ್ಲಿ ಸಾಗರ’ ಕೃತಿಗೆ ದತ್ತಿನಿಧಿ ಪ್ರಶಸ್ತಿ
Update: 2019-07-10 21:47 IST
ಉಡುಪಿ, ಜು.10: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ, ಲೇಖಕಿ ಡಾ.ನಿಕೇತನ ಅವರ ‘ಬೊಗಸೆಯಲ್ಲಿ ಸಾಗರ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2018-19ನೇ ಸಾಲಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದತ್ತಿನಿಧಿ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಷತ್ತಿನ ಸಭಾಂಗಣದಲ್ಲಿ ಜು.12ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಕಾಲೇಜುಗಳಲ್ಲಿ ಸಹಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಡಾ.ನಿಕೇತನ ಮಹಿಳಾ ಪರ ಚಿಂತಕಿಯೆಂದು ಗುರುತಿಸಿಕೊಂಡಿದ್ದಾರೆ. ಅವರು ಎಂಟು ಕೃತಿಗಳನ್ನು ಪ್ರಕಟಿಸಿ ದ್ದಾರೆ. ಅವರ ಸ್ತ್ರೀ ದೃಷ್ಟಿ ಮತ್ತು ಮಹಿಳಾ ಅಭಿವ್ಯಕ್ತಿ: ಸಮಕಾಲೀನ ಸಂವಾದ ಕೃತಿಗಳಿಗೆ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಲಭಿಸಿದೆ.