×
Ad

ಭಟ್ಕಳ: ಜು.14ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2019-07-10 22:45 IST

ಭಟ್ಕಳ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಭಾರತಿಯ ವೈದ್ಯಕಿಯ ಸಂಸ್ಥೆ,  ರೋಟರಿ ಕ್ಲಬ್ ಹೊನ್ನಾವರ, ಲಯನ್ಸ್ ಕ್ಲಬ್ ಹೊನ್ನಾವರ, ಜಿ.ಎಸ್.ಬಿ. ಯುವ ವಾಹಿನಿ  ಮತ್ತು ಮಹಿಳಾ ವಾಹಿನಿ ಹೊನ್ನಾವರ,  ಟೆಂಪೂ ಚಾಲಕ ಮಾಲಕರ ಸಂಘ,  ಔಷದ ವ್ಯಾಪಾರಸ್ಥರ ಸಂಘ ಮತ್ತು ಆಟೋ ಮಾಲಕ ಸಂಘ ಹೊನ್ನಾವರ ಇವರ ಸಹಭಾಗಿತ್ವದಲ್ಲಿ ಹೊನ್ನಾವರದ ಮಾರ್‍ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.14ರಂದು ರವಿವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಹೊನ್ನಾವರ, ಭಟ್ಕಳದ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಣಿಪಾಲ್ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಉಪ ವ್ಯವಸ್ಥಾಪಕ ರವಿಕಿರಣ ಪೈ ತಿಳಿಸಿದರು.

ಅವರು ಭಟ್ಕಳದ ಖಾಸಗೀ ಹೋಟೇಲ್‍ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. 

ಶಿಬಿರದಲ್ಲಿ ಹೃದ್ರೋಗ ಚಿಕಿತ್ಸೆ, ನರರೋಗ ಶಸ್ತ್ರ ಚಿಕಿತ್ಸೆ, ರೇಡಿಯೋಥೆರಪಿ ಮತ್ತು ಕ್ಯಾನ್ಸರ್ ಚಿಕಿತ್ಸೆ,  ಶ್ವಾಸಕೋಶ ಚಿಕಿತ್ಸೆ, ಕಿವಿ ಮೂಗು ಗಂಟಲು  ಚಿಕಿತ್ಸೆ, ಚರ್ಮ ರೋಗ,  ಮಕ್ಕಳ ಚಿಕಿತ್ಸ, ಸಾಮಾನ್ಯ ವೈದ್ಯಕಿಯ ತಪಾಸಣೆ ಸೇರಿದಂತೆ ವಿವಿಧ ವಿಭಾಗ ತಜ್ಞ ವೈದ್ಯರುಗಳು ಭಾಗವಹಿಸಲಿದ್ದು ನಾಗರೀಕರು ಹೆಚ್ಚಿನ ಪ್ರಯೋಜನ ಪಡೆಯುವಂತೆಯೂ ಕೋರಿದರು.

ಮಣಿಪಾಲ ಆರೋಗ್ಯ ಕಾರ್ಡ್  2019ನೇ ದರ ಕುರಿತು ಮಾಹಿತಿ ನೀಡಿದ ಅವರು ಭಟ್ಕಳ ತಾಲೂಕಿನಲ್ಲಿ ಸುಮಾರು 36 ಸಾವಿರ ಜನರು ಮಣಿಪಾಲ ಕಾರ್ಡ್ ಹೊಂದಿದ್ದಾರೆ. ಇದರ ಉದ್ದೇಶ ಎಲ್ಲರಿಗೂ ಆರೋಗ್ಯ ಭಾಗ್ಯ ಕೈಗೆಟಕುವ ದರದಲ್ಲಿ ದೊರೆಯಬೇಕೆನ್ನುವುದು. ರಿಯಾಯಿತಿ ಸೌಲಭ್ಯವನ್ನು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಪಡೆಯ ಬಹುದು ಎಂದ ಅವರು ಕಳೆದ ವರ್ಷ 2.5 ಲಕ್ಷ ಸದಸ್ಯರಾಗಿದ್ದು ಒಟ್ಟೂ 5.98 ಕೋಟಿ ರೂ. ಕಡಿತ ಸೌಲಭ್ಯ ಪಡೆದುಕೊಂಡಿದ್ದಾರೆ. ಈ ಹಿಂದೆ ಒಂದು ವರ್ಷ ಇದ್ದ ಕಾರ್ಡನ್ನು ಈ ವರ್ಷದಿಂದ ಎರಡು ವರ್ಷಕ್ಕೆ ಮಾಡಿಸುವ ಅವಕಾಶ ಕೂಡಾ ನೀಡಲಾಗಿದೆ. ಅಲ್ಲದೇ ಮಣಿಪಾಲ ಆಸ್ಪತ್ರೆ ಗೋವಾ ಕೂಡಾ ಈ ಬಾರಿಯ ಕಾರ್ಡನಲ್ಲಿ ಸೇರಿದೆ ಎಂದರು.

ಭಟ್ಕಳದಲ್ಲಿ ಮಣಿಪಾಲ ಆರೋಗ್ಯ ಕಾರ್ಡ ಪಡೆಯಲು ಇಲ್ಲವೇ ನವೀಕರಿಸಲು ಸೈಂಟ್ ಮಿಲಾಗ್ರೀಸ್ ಸೌಹಾರ್ದ (9538894590),ಮುರ್ಡೇಶ್ವರ (9538020303), ಶಿರಾಲಿ (8277099156), ಗೌರೀಶಂಕರ ಮೊಗೇರ (8722540496), ರಾಧಾಕೃಷ್ಣ ಭಟ್ಟ (9448221117), ಕವಿತಾ ಶೇಟ್ (8310910797) ಇವರನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದರು. 

ಈ ಸಂದರ್ಭದಲ್ಲಿ ಶ್ರೀನಿವಾಸ ಭಾಗವತ್, ಭಟ್ಕಳ ಕೋ-ಅರ್ಡಿನೇಟರ್ ರಾಜೇಂದ್ರ ನಾಯ್ಕ, ಸೈಂಟ್ ಮಿಲಾಗ್ರಿಸ್‍ನ ತಿಮ್ಮಪ್ಪ ಮೊಗೇರ, ಶ್ರೀನಿವಾಸ ದೇವಡಿಗ, ತುಳಸಿದಾಸ ದೇವಡಿಗ ಮುಂತಾದವರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News