ರೈಲ್ವೆಯಲ್ಲಿ 2.98 ಲಕ್ಷ ಹುದ್ದೆಗಳು ಖಾಲಿ

Update: 2019-07-10 17:30 GMT

ಹೊಸದಿಲ್ಲಿ, ಜು.10: ಈ ವರ್ಷದ ಜೂನ್ 1ರಂದು ರೈಲ್ವೆಯಲ್ಲಿ 2.98 ಲಕ್ಷ ಹುದ್ದೆಗಳು ಖಾಲಿ ಇವೆ ಹಾಗೂ ಸುಮಾರು 2.94 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

 ಬುಧವಾರ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಸಚಿ ಪಿಯೂಷ್ ಗೋಯೆಲ್ ಅವರು ಕಳೆದ ಒಂದು ದಶದಲ್ಲಿ ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ 4.61 ಲಕ್ಷಕ್ಕೂ ಅಧಿಕ ಮಂದಿಯ ನೇಮಕವಾಗಿದೆ ಎಂದು ತಿಳಿಸಿದರು.

1991ರಲ್ಲಿ 16,54,985 ರಷ್ಟಿದ್ದ ರೈಲ್ವೆ ನೌಕರರ ಸಂಖ್ಯೆಯು 2019ರಲ್ಲಿ 12,48,101 ಕುಸಿದಿತ್ತು. ಆದಾಗ್ಯೂ ಇದರಿಂದ ರೈಲ್ವೆ ಸೇವೆಯ ಮೇಲೆ ಯಾವುದೇ ಪರಿಣಾಮವುಂಟಾಗಿಲ್ಲವೆಂದು ಅವರು ತಿಳಿಸಿದರು.

 2019ರ ಜೂನ್ 1ರಂದು ರೈಲ್ವೆಯಲ್ಲಿ ಎ,ಬಿ,ಸಿ, ಹಾಗೂ ಡಿ ಶ್ರೇಣಿಯ 2,98,574 ಹುದ್ದೆಗಳು ಖಾಲಿಯಿರುವುದಾಗಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 ರೈಲ್ವೆ ನೇಮಕಾತಿ ಮಂಡಳಿ ಹಾಗೂ ರೈಲ್ವೆ ನೇಮಕಾತಿ ಸೆಲ್‌ಗಳ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು ಅವರು ಹೇಳಿದರು.

1,51,843 ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ. 2019-20ರ ಅವಧಿಯಲ್ಲಿ 1,42 ಹುದ್ದೆಗಳಿಗೆ ಪರೀಕ್ಷೆಗಳು ನಡೆಯಲಿವೆ. ನೇಮಕಾತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿಯನ್ನು ಕೂಡಾ ಪರಿಗಣಿಸಲಾಗುವುದು ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News