ಸಂತ ಅಲೋಶಿಯಸ್ ಕಾಲೇಜಿಗೆ ಬೆಲ್ಜಿಯಂ ವಿದ್ಯಾರ್ಥಿ ತಂಡ ಭೇಟಿ

Update: 2019-07-11 12:42 GMT

ಮಂಗಳೂರು, ಜು.11: ಬೆಲ್ಜಿಯಂನ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ 14 ವಿದ್ಯಾರ್ಥಿಗಳನ್ನೊಳಗೊಂಡ ಒಲಿವೆಂಟ್ ಎಂಬ ಹೆಸರಿನ ತಂಡವೊಂದು ಸಂತ ಅಲೋಶಿಯಸ್ ಕಾಲೇಜಿಗೆ ಭೇಟಿ ನೀಡಿದೆ.

ವಿಜ್ಞಾನ, ಕಾನೂನು, ಆರ್ಥಿಕತೆ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ-ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅಧ್ಯಯನಶೀಲರಾಗಿರುವ ಈ ಒಲಿವೆಂಟ್ ತಂಡ, ವಿದೇಶಗಳಿಗೆ ಭೇಟಿ ನೀಡಿಅಲ್ಲಿನ ಸಂಸ್ಕೃತಿ, ಆಚಾರ -ವಿಚಾರ, ನಂಬಿಕೆ ಆಚರಣೆ, ವಾತಾವರಣಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ವಿದೇ ಪ್ರವಾಸವನ್ನು ಕೈಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಈ ತಂಡವುಒಂದು ವಾರದ ಅವಧಿಯ ಪ್ರವಾಸದಲ್ಲಿ ಸಂತ ಅಲೋಶಿಯಸ್ ಕಾಲೇಜು ಆವರಣ ಮತ್ತು ಇಲ್ಲಿನ ವೈವಿಧ್ಯಮಯವಾದ ಸಕಲ ಸೌಲಭ್ಯಗಳನ್ನು ವೀಕ್ಷಿಸಿ, ಕಾಲೇಜಿನ ಬೇರೆ ಬೇರೆ ಪ್ರಾಧ್ಯಾಪಕರ ವಿಭಿನ್ನ ವಿಷಯಗಳ ಮೇಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಮಾತ್ರವಲ್ಲದೇ ಈ ವಿದ್ಯಾರ್ಥಿಗಳು ಮಂಗಳೂರು ನಗರದ ಆಸುಪಾಸಿನಲ್ಲಿರುವ ಕಂನಿಗಳು ಮತ್ತು ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿದರು. ವಿದೇಶದಲ್ಲಿರುವ ತಮ್ಮ ದೇಶದ ಜನರರಕ್ಷಣೆಯನ್ನು ನೋಡಿಕೊಳ್ಳಲು ಬೆಲ್ಜಿಯಂ ಸರಕಾರ ನಿಯೋಜಿಸಿದ ಅಧಿಕಾರಿ ಜನರಲ್ ವ್ಯಾನ್‌ದೆ ವ್ರೆಕನ್ ಮಾರ್ಕ್ ಅವರು ಚೆನ್ನೈಯಿಂದ ಆಗಮಿಸಿ ಈ ತಂಡವನ್ನು ಸೇರಿಕೊಂಡು ಸಂತ ಅಲೋಶಿಯಸ್ ಚಾಪೆಲ್‌ನಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂತ ಅಲೋಶಿಯಸ್ ಕಾಲೇಜಿನ ವಿದೇಶಿ ಸಹಯೋಗ ಘಟಕದ ಡೀನ್ ಆಗಿರುವ ಡಾ. ವಿನ್ಸೆಂಟ್ ಮಸ್ಕರೇನ್ಹಸ್ ಅವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ.

ಈ ತಿಂಗಳ 8ನೇ ತಾರೀಕಿಗೆ ನಗರಕ್ಕೆ ಆಗಮಿಸಿದ ಈ ವಿದ್ಯಾರ್ಥಿಗಳ ತಂಡ ದ.ಕ. ಜಿಲ್ಲಾಧಿಕಾರಿ ಮತ್ತು ಮುಖ್ಯಕಾರ್ಯ ರ್ವಹಣಾಧಿಕಾರಿಯವರ ಜೊತೆಯಲ್ಲಿ ಸಂವಾದ ನಡೆಸಿದ್ದಾರೆ. ಈ ತಂಡಕ್ಕಾಗಿ ಈ ಜಿಲ್ಲೆಯ ಚರಿತ್ರೆ, ಸಂಸ್ಕೃತಿ, ಸಾರ್ವಜಕ ಆರೋಗ್ಯ ಮೊದಲಾದ ವಿಷಯಗಳ ಬಗ್ಗೆ ಅತಿಥಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾಹಿತಿ ತಂತ್ರಜ್ಞಾನ, ಕಾನೂನು, ಅರ್ಥಶಾಸ್ತ್ರ, ಸಾರ್ವಜನಿಕ ಸೇವೆ ಮತ್ತು ಆಡಳಿತ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮಗಳನ್ನು ಕೂಡಾ ನಡೆಸಲಾಯಿತು. ಧರ್ಮಸ್ಥಳದಲ್ಲಿರುವ ಸಾಂಸ್ಕೃತಿಕ ಮತ್ತು ಯೋಗ ಕೇಂದ್ರಕ್ಕೆ ಭೇಟಿ ನೀಡಿ, ಮೂಡಬಿದಿರೆಯಲ್ಲಿರುವ ಸಾವಿರಕಂಬದ ಬಸದಿಯ ವೈಶಿಷ್ಟ್ಯವನ್ನು ತಿಳಿದುಕೊಳ್ಳುವ ಉದ್ದೇಶ ಈ ತಂಡ ಹೊಂದಿದೆ ಎಂದು ಕಾಲೇಜು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News