ಅಣ್ಣಳಿಕೆ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2019-07-11 12:57 GMT

ಬಂಟ್ವಾಳ, ಜು. 11: ಆಲ್ ಕಾರ್ಗೊ ಲಾಜಿಸ್ಟಿಕ್ ಮಂಗಳೂರು, ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್, ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ ಮಂಗಳೂರು, ಜನ ಶಿಕ್ಷಣ ಟ್ರಸ್ಟ್ ಮುಡಿಪು, ಅರಳ ಗ್ರಾಮ ಪಂಚಾಯತ್, ಸುಗ್ರಾಮ ಜಾಗೃತಿ ವೇದಿಕೆ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಮತ್ತು ಸಮುದಾಯ ದಂತ ಆರೋಗ್ಯ ವಿಭಾಗ ಇವುಗಳ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಬಂಟ್ವಾಳ ತಾಲೂಕಿನ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಸಭಾ ಭವನದಲ್ಲಿ ಮಂಗಳವಾರ ಜರಗಿತು.

ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಇದರ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳು ವರದಾನವಾಗಿದ್ದು, ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ಊರಲ್ಲೇ ಲಭ್ಯವಾಗುತ್ತದೆ. ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ನಿರ್ದೇಶಕ ಶೀನ ಶೆಟ್ಟಿ, ಅರಳ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಂಗಮ್ಮ, ಹಾಗೂ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ವೈದ್ಯ ಡಾ. ಧರ್ಣಪ್ಪ ಪೂಜಾರಿ, ಡಾ. ರಾಜೇಶ್,  ಆಲ್ ಕಾರ್ಗೊ ಲಾಜಿಸ್ಟಿಕ್ ಯೋಜನಾ ಸಂಯೋಜಕ ವಿಲಿಯಂ ಸಾಮ್ಯುವೆಲ್, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅವಿಲ್ ಮಿನೇಜಸ್, ಕಾರ್ಯದರ್ಶಿ ಮೇರಿ ಶ್ರುತಿ ಮಾಡ್ತಾ, ಸದಸ್ಯರಾದ ರಾಮಣ್ಣ ರೈ, ಸುಮಿತ್ರಾ ಆರ್. ಶೆಟ್ಟಿಗಾರ್, ಗ್ರಾಪಂ ಸದಸ್ಯ ಲಕ್ಷ್ಮಿ ಶೀಧರ ಶೆಟ್ಟಿ, ಸುಗ್ರಾಮ ಜಾಗೃತಿ ವೇದಿಕೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.  

ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಅಶೋಕ್ ಸ್ವಾಗತಿಸಿದರು. ರೋಟರಿ ಕ್ಲಬ್ ಕೋಶಾಧಿಕಾರಿ ರಾಮಚಂದ್ರ ಶೆಟ್ಟಿಗಾರ್ ವಂದಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕಿ  ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು. ಅಂಕಿತಾ, ಆಕಾಶ್ ಸಹಕರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News