ಹಳೆಕೋಟೆ ಶಾಲಾ ಟ್ಯಾರಿಸ್‍ನಲ್ಲೊಂದು ಗದ್ದೆ ಮಾದರಿ

Update: 2019-07-11 13:00 GMT

ಉಳ್ಳಾಲ : ಮುಂದಿನ ತಲೆಮಾರಿಗೆ ನಾವು ಉಪಯೋಗಿಸುವ ಅನ್ನವನ್ನು ಭತ್ತದಿಂದ ಉಂಟಾಗುವ ಅಕ್ಕಿಯಿಂದ ಮಾಡುತ್ತೇವೆ ಎಂದು ತಿಳಿಯಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯವಾಗಿದೆ ಎಂದು ಕೇಂದ್ರ ಜುಮಾ ಮಸ್ಜಿದ್‍ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್‍ ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯ ಮೇಲಂತಸ್ತಿನಲ್ಲಿ ಗದ್ದೆಯ ಮಾದರಿ ತಯಾರಿಸಿ ಅಬ್ದುಲ್ ರಶೀದ್‍ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಉಳ್ಳಾಲ ನಗರ ಸಭೆಯ ಆಯುಕ್ತೆ ವಾಣಿ ವಿ. ಆಳ್ವ ಅವರು ನಾಟಿ ಮಾಡಿದರು. 

ಉಳ್ಳಾಲದ ಕೃಷಿಕ ವಿಜಯ ಅವರ ಮಾರ್ಗದರ್ಶನದಲ್ಲಿ ಮಾದರಿ ಗದ್ದೆಯನ್ನು ಶಾಲಾ ಟ್ಯಾರಿಸ್ ನಲ್ಲಿ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಗದ್ದೆಯ ಮಹತ್ವ ತಿಳಿಯಲು ಸಹಕಾರಿಯಾಗಿದೆ ಎಂದು ಈ ಸಂದರ್ಭ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News