ವಿಶ್ವಕಪ್ ಸೆಮಿ ಫೈನಲ್: ಆಸ್ಟ್ರೇಲಿಯ 223 ರನ್‌ಗೆ ಆಲೌಟ್
Update: 2019-07-11 18:48 IST
ಬರ್ಮಿಂಗ್‌ಹ್ಯಾಮ್, ಜು.11: ಮಾಜಿ ನಾಯಕ ಸ್ಟೀವನ್ ಸ್ಮಿತ್(85) ಸಾಹಸದಿಂದ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ 223 ರನ್ ಗಳಿಸಿದೆ.
ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡು 49 ಓವರ್‌ಗಳಲ್ಲಿ 223 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ. 10 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಆ್ಯರೊನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು.
ಆಗ 4ನೇ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿದ ಸ್ಮಿತ್ ಹಾಗೂ ಅಲೆಕ್ಸ್ ಕಾರೆ ತಂಡವನ್ನುಆಧರಿಸಿದರು. 85 ರನ್ ಗಳಿಸಿದ ಸ್ಮಿತ್ ಅವರು 6ನೇ ವಿಕೆಟ್‌ಗೆ ಸ್ಟಾರ್ಕ್ ಅವರೊಂದಿಗೆ 50 ರನ್ ಸೇರಿಸಿದರು.
ಕ್ರಿಸ್ ವೋಕ್ಸ್(3-20) ಹಾಗೂ ಆದಿಲ್ ರಶೀದ್(3-54) ತಲಾ ಮೂರು ವಿಕೆಟ್, ಅರ್ಚರ್ 32ಕ್ಕೆ 2 ವಿಕೆಟ್ ಪಡೆದರು. ಮಾರ್ಕ್‌ವುಡ್ (1-45)ಒಂದು ವಿಕೆಟ್ ಪಡೆದರು.