ವಿಶ್ವಕಪ್: ಅಲೆಕ್ಸ್ ಕಾರೆ ಗಲ್ಲಕ್ಕೆ ಅಪ್ಪಳಿಸಿದ ಅರ್ಚರ್ ಎಸೆತ

Update: 2019-07-11 13:22 GMT

ಬರ್ಮಿಂಗ್‌ಹ್ಯಾಮ್, ಜು.11: ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಐಸಿಸಿ ವಿಶ್ವಕಪ್‌ನ ಎರಡನೇ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿಕೆಟ್‌ಕೀಪರ್-ಅಲೆಕ್ಸ್ ಕಾರೆ ಗಲ್ಲದಲ್ಲಿ ರಕ್ತ ಸೋರುತ್ತಿದ್ದ ಹಿನ್ನೆಲೆಯಲ್ಲಿ ಮುಖಕ್ಕೆ ಬ್ಯಾಂಡೇಜ್ ಹಾಕಿಕೊಂಡು ಬ್ಯಾಟಿಂಗ್ ಮಾಡಿದರು.

8ನೇ ಓವರ್‌ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ಎಸೆದ ಚೆಂಡು ಕಾರೆ ಅವರ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಚೆಂಡಿನ ಹೊಡೆತಕ್ಕೆ ಹೆಲ್ಮೆಟ್ ತಲೆಯಿಂದ ಹೊರಗೆ ಬಂದಿತ್ತು. ಆಗ ಅವರ ಗಲ್ಲದಲ್ಲಿ ರಕ್ತ ಸೋರಲಾರಂಭಿಸಿತು.

 70 ಎಸೆತಗಳಲ್ಲಿ 46 ರನ್ ಗಳಿಸಿದ ಕಾರೆ ಆಸ್ಟ್ರೇಲಿಯ ತಂಡ 14 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮಾಜಿ ನಾಯಕ ಸ್ಟೀವನ್ ಸ್ಮಿತ್‌ರೊಂದಿಗೆ 4ನೇ ವಿಕೆಟ್ ಜೊತೆಯಾಟದಲ್ಲಿ 103 ರನ್ ಗಳಿಸಿದರು.

ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಗಾಯಗೊಂಡಿರುವ ಪೀಟರ್ ಹ್ಯಾಂಡ್ಸ್‌ಕಾಂಬ್ ಬದಲಿಗೆ ಉಸ್ಮಾನ್ ಖ್ವಾಜಾ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಕಳೆದ ಲೀಗ್ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News