×
Ad

ಕಟಪಾಡಿ: ಸರಕಾರಿ ಸವಲತ್ತುಗಳ ಕುರಿತು ಮಾಹಿತಿ ಶಿಬಿರ

Update: 2019-07-11 20:45 IST

ಉಡುಪಿ, ಜು.11: ಕಟಪಾಡಿ ಸಂತ ವಿನ್ಸೆಂಟ್ ದಿ ಪಾವ್ಲ್ ದೇವಾಲಯದ ಕೆಥೊಲಿಕ್ ಸಭಾ ಘಟಕ ಮತ್ತು ಶಿಕ್ಷಣ ಮತ್ತು ಶ್ರೀಸಾಮಾನ್ಯ ಆಯೋಗಗಳ ಜಂಟಿ ಆಶ್ರಯದಲ್ಲಿ ಅಲ್ಪಸಂಖ್ಯಾತರಿಗೆ ಲಭಿಸುವ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ರವಿವಾರ ಚರ್ಚಿನ ಸಭಾಂಗಣದಲ್ಲಿ ನಡೆಯಿತು.

ಮಾಹಿತಿ ಶಿಬಿರವನ್ನು ಚರ್ಚಿನ ಧರ್ಮಗುರು ವಂ.ರೋನ್ಸನ್ ಡಿಸೋಜಾ ಉದ್ಘಾಟಿಸಿ, ಕ್ರೈಸ್ತ ಸಮುದಾಯಕ್ಕೆ ಸರಕಾರ ವಿವಿಧ ಸವಲತ್ತುಗಳನ್ನು ನೀಡಿದ್ದರೂ ಅದನ್ನು ಪಡೆದುಕೊಳ್ಳುವಲ್ಲಿ ಸಮುದಾಯ ವಿಫಲವಾಗಿದೆ. ಆದುದರಿಂದ ಈ ಬಗ್ಗೆ ಅರಿವು ಪಡೆದು ಸೌಲಭ್ಯಗಳ ಸದುಪಯೋಗ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಅಧಿಕಾರಿ ಮುಮ್ತಾಜ್ ಅಲ್ಪಸಂಖ್ಯಾತರಿಗೆ ನೀಡಲಾಗುವ ಸರಕಾರಿ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಕಟಪಾಡಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 18 ಆಯೋಗಗಳ ಸಂಚಾಲಕ ವಿಲ್ಫ್ರೇಡ್ ಲೂವಿಸ್ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಕಟಪಾಡಿ ಘಟಕದ ಕಾರ್ಯದರ್ಶಿ ಐಡಾ ಫುರ್ಟಾಡೊ ಸ್ವಾಗತಿಸಿದರು. ಅಧ್ಯಕ್ಷ ಬ್ರಾಯೆನ್ ಕೊರೆಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News