ಪ್ರತಿಯೊಬ್ಬರಿಂದಲೂ ಸ್ವಚ್ಛತೆಯ ಸಂಕಲ್ಪ ಮುಖ್ಯ-ಏಕಗಮ್ಯಾನಂದ ಸ್ವಾಮೀಜಿ

Update: 2019-07-12 10:04 GMT

ಮಂಗಳೂರು, ಜು.12: ಸ್ವಚ್ಚತೆಯ ಸಂಕಲ್ಪ ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ವಿಶ್ವ ಪರಿಸರ ದಿನದ ಅಂಗವಾಗಿ ದ.ಕ ಜಿಲ್ಲಾಡಳಿತ ಮಂಗಳೂರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ , ಮಂಗಳೂರು ಸ್ಮಾರ್ಟ್  ಸಿಟಿ,ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ,ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ ನಗರದ ಟಿಎಂಎಪೈ ಸಭಾಂಗಣ ದಲ್ಲಿಂದು ಹಮ್ಮಿಕೊಂಡ ಪರಿಸರ ಜಾಥ ಹಾಗೂ ಪರಿಸರ ಪ್ರಶಸ್ತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸ್ವಚ್ಛತೆಗಾಗಿ ಜಾಗ್ರತಿ  ಮತ್ತು ಅರಿವು ಮೂಡಿಸುವುದು ಮುಖ್ಯ.ನಮ್ಮ ಕಸ ನಮ್ಮ ಹೊಣೆಗಾರಿಕೆ ಎಂದಾಗಬೇಕಾಗಿದೆ. ಕಾಟಾ ಚಾರದ ಕಾರ್ಯ ಕ್ರಮಗಳಿಂದ ನೈಜ ಕಾರ್ಯಕ್ರಮಕ್ಕೆ ಹೆಚ್ಚು ಮೂಡಿಸಬೇಕಾಗಿದೆ. ಸ್ವಚ್ಛತೆಯ ಜಾಗ್ರತಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಎಂದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಮಾ ರಂಭದ ಅಧ್ಯಕ್ಷ ತೆ ವಹಿಸಿ ಶುಭ ಹಾರೈಸಿದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯುಸ್ ಎಲ್.ರೋಡ್ರಿಗಸ್,ಎಂ.ವೆಂಟರಾಮು, ಹನುಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎ.ವಿ.ಕರಿಕಾಲನ್ ,ಮಂಗಳೂರು ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್.ನಾರಾಯಣಪ್ಪ, ಎನ್ಐಟಿಕೆ ಸುರತ್ಕಲ್ ನ ಪ್ರಾ ಧ್ಯಾಪಕ ಶ್ರೀನಿಕೇತನ್ , ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದಶಿ ಅಜಿತ್ ಕಾಮತ್ ಮೊದ ಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿ ರಾಜಶೇಖರ್ ಪುರಾಣಿಕ್ ಸ್ವಾಗತಿಸಿದರು. ಪರಿಸರ ಜಾಥವನ್ನು ಮಂಗಳಾ ಕ್ರೀಡಾಂಗಣ ದಲ್ಲಿ ಮೂರನೇ ಹೆಚ್ಚು ವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಉದ್ಘಾಟಿಸಿದರು.

ಮುಕ್ಕದ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನವಿತರಿಸಲಾಯಿತು.

ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಶ್ರೀ ರಾಮಕೃಷ್ಣ ಆಶ್ರಮ ದ ಏಕಗಮ್ಯಾನಂದ ಸ್ವಾಮೀಜಿ ಯವರಿಗೆ ವಿಶ್ವ ಪರಿಸರದ ದಿನದ ಅಂಗವಾಗಿ ಗೌರವಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News