ಮೊಸಳೆಯನ್ನು ನುಂಗಿದ ಹೆಬ್ಬಾವು !

Update: 2019-07-12 11:52 GMT

ಸಿಡ್ನಿ : ಭಾರೀ ಗಾತ್ರದ ಹೆಬ್ಬಾವೊಂದು (ಆಲಿವ್ ಪೈಥಾನ್)  ಆಸ್ಟ್ರೇಲಿಯಾದ ಮೊಸಳೆಯನ್ನು  ನುಂಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಚಿತ್ರಗಳನ್ನು ಕ್ವೀನ್ಸ್ ಲ್ಯಾಂಡ್ ಮೌಂಟ್ ಇಸಾದಲ್ಲಿ ಕ್ಲಿಕ್ಕಿಸಿದ್ದು, ಆಸ್ಟ್ರೇಲಿಯಾದ ಜಿ ಜಿ ವೈಲ್ಡ್  ಲೈಫ್ ರೆಸ್ಕ್ಯೂ ಸಂಘಟನೆ ಅದನ್ನು ಆನ್ ಲೈನ್ ನಲ್ಲಿ ಶೇರ್ ಮಾಡಿದೆ.

''ಆಸ್ಟ್ರೇಲಿಯಾದ ಎರಡನೇ ಅತ್ಯಂತ ದೊಡ್ಡ  ಹಾಗೂ  ಪಶ್ಚಿಮ ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಹಾವು (ಆಲಿವ್ ಪೈಥಾನ್)  ಆಸ್ಟ್ರೇಲಿಯಾದ ಮೊಸಳೆ (ಕ್ರೊಕೊಡೈಲಸ್ ಜಾನ್‍ಸ್ಟೋನಿ) ಇದನ್ನು ತಿನ್ನುತ್ತಿರುವ ಅದ್ಭುತ ಚಿತ್ರಗಳು, ಇವುಗಳನ್ನು ಮಾರ್ಟಿನ್ ಮುಲ್ಲರ್ ಕ್ಲಿಕ್ಕಿಸಿದ್ದಾರೆ'' ಎಂದು ಜಿ ಜಿ ವೈಲ್ಡ್ ಲೈಫ್ ತನ್ನ ಪೋಸ್ಟ್ ನಲ್ಲಿ ಹೇಳಿದೆ.

ಬೆಚ್ಚಿ ಬೀಳಿಸುವಂತಹ ಈ ಫೋಟೋಗಳನ್ನು ಇಲ್ಲಿಯ ತನಕ 42,000 ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಆಲಿವ್ ಪೈಥಾನ್ 13 ಅಡಿ ಉದ್ದದ ತನಕ ಬೆಳೆಯುತ್ತದೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News