ಉಡುಪಿ: ಕಂದಾಯ ಅದಾಲತ್‌ನಲ್ಲಿ 85 ಪ್ರಕರಣ ವಿಲೇವಾರಿ

Update: 2019-07-12 15:55 GMT

ಉಡುಪಿ, ಜು.12: ತಾಲೂಕಿನ ಪಿಂಚಣಿ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮ ಬನ್ನಂಜೆಯಲ್ಲಿರುವ ಹಳೆಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕುಂದಾಪುರ ಸಹಾಯಕ ಆಯುಕ್ತ ಎಸ್.ಎಸ್ ಮುಕೇಶ್ವರ್‌ಇವರಅ್ಯಕ್ಷತೆ ಯಲ್ಲಿ ಗುರುವಾರ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಅದಾಲತ್ ಸೂಕ್ತ ವೇದಿಕೆಯಾಗಿದೆ. ವಿಶೇಷವಾಗಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಶೀಲ್ದಾರ್ ಸುರೇಂದ್ರಬಾಬು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು. ಪಿಂಚಣಿ ಅದಾಲತ್‌ನಲ್ಲಿ 22 ಮಂದಿ ಫಲಾನುಭವಿಗಳನ್ನು ಹಾಗೂ ಕಂದಾಯ ಅದಾಲತ್‌ನಲ್ಲಿ 85 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News