ಸಾಲಿಗ್ರಾಮ ಪ.ಪಂಚಾಯತ್: ನಳ್ಳಿ ನೀರಿನ ಶುಲ್ಕ ಪಾವತಿಗೆ ಸೂಚನೆ
ಉಡುಪಿ, ಜು.12: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಳ್ಳಿ ಸಂಪರ್ಕ ಪಡೆದಿರುವ ಖಾತೆದಾರರು/ ಅನುಭೋಗದಾರರು ಜೂನ್ ತಿಂಗಳ ಕೊನೆಯವರೆಗೆ ಬಾಕಿ ಇರುವ ನಳ್ಳಿ ನೀರಿನ ಶುಲ್ಕವನ್ನು ಜುಲೈ ತಿಂಗಳ ಕೊನೆ ಯೊಳಗೆ ಪಾವತಿಸುವಂತೆ ಹಾಗೂ ಎಲ್ಲಾ ಸಂಪರ್ಕಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ತಿಳಿಸಲಾಗಿದೆ.
ಅಲ್ಲದೇ ಅನಧಿಕೃತವಾಗಿ ನಳ್ಳಿ ನೀರಿನ ಸಂಪರ್ಕವನ್ನು ಪಡೆದುಕೊಂಡ ಖಾತೆದಾರರು/ಅನುಭೋಗದಾರರು ಪಟ್ಟಣ ಪಂಚಾಯತ್ ಕಚೇರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿ, ದಂಡ ಶುಲ್ಕ ಪಾವತಿಸಿ, ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಬೇಕು.
ಅನಧಿಕೃತವಾಗಿ ಮೋಟಾರ್ ಪಂಪ್ ಅಳವಡಿಸಿ ಕೃಷಿ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳುತ್ತಿರುವವರು ಕೂಡಲೇ ಅದನ್ನು ತೆರವುಗೊಳಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಪಂಪು ವಶಪಡಿಸಿಕೊಂಡು ದಂಡ ವಿಧಿಸಿ ಅನಧಿಕೃತ ಸಂಪರ್ಕವನ್ನು ಕಡಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾ ಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.